ಮನೋರಂಜನೆ

ಭಾನುವಾರದಂದು ಮಕ್ಕಳಿಂದ ಸ್ಕೇಟಿಂಗ್ ತಿರಂಗಾ ಮ್ಯಾರಥಾನ್-2022

ಸುದ್ದಿಲೈವ್. ಕಾಂ/ಶಿವಮೊಗ್ಗ

ಶಿವಮೊಗ್ಗದ ನ್ಯೂ ಹಾಟ್‌ ವೀಲ್ಸ್ ರೋಲರ್ ಸ್ಟೇಟಿಂಗ್ ಕ್ಲಬ್ ವತಿಯಿಂದ ವಿಶೇಷ ರೀತಿಯಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದು, ಸ್ಟೇಟಿಂಗ್ ತಿರಂಗಾ ಮ್ಯಾರಥಾನ್-2022ನ್ನು ಆಗಸ್ಟ್ 14ರಂದು ಬೆಳಿಗ್ಗೆ 10ಕ್ಕೆ ಹೆಲಿಪ್ಯಾಡ್ ಸರ್ಕಲ್‌ನಿಂದ ಹಮ್ಮಿಕೊಳ್ಳಲಾಗಿದೆ.

ಕ್ಲಬ್ ನ 50ಕ್ಕೂ ಹೆಚ್ಚಿನ ಮಕ್ಕಳು ಹಾಗೂ ಯುವಕರು ಸ್ಟೇಟ್ ಹಾಕಿಕೊಳ್ಳುವ ಮೂಲಕ ಸ್ಟೇಟಿಂಗ್ ಮಾಡುವುದಲ್ಲದೇ ಪ್ರತಿಯೊಬ್ಬರೂ ಕೂಡ ಧ್ವಜ ಹಾರಾಡಿಸುತ್ತಾ ಸಾಗಲಿದ್ದಾರೆ. ಸ್ಟೇಟಿಂಗ್ ತಿರಂಗಾ ಮ್ಯಾರಥಾನ್ ಶಿವಮೊಗ್ಗದ ಹೆಲಿಪ್ಯಾಡ್ ಸರ್ಕಲ್‌ನಿಂದ ಆರಂಭವಾಗಿ ಬಸ್‌ ನಿಲ್ದಾಣದ ಅಶೋಕ ಸರ್ಕಲ್‌ಗೆ ಅಲ್ಲಿಂದ ಬಿ.ಹೆಚ್.ರಸ್ತೆಯ ಮೂಲಕ ಅಮೀರ್ ಅಹಮದ್ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ನೆಹರು ರಸ್ತೆ ಮೂಲಕ ಗೋಪಿ ಸರ್ಕಲ್, ಅಲ್ಲಿಂದ ಬಾಲರಾಜ್ ಅರಸ್ ರಸ್ತೆಯ ಮೂಲಕ ಕೋಟ್ ಸರ್ಕಲ್, ಅಲ್ಲಿಂದ ನೆಹರು ಕ್ರೀಡಾಂಗಣದವರೆಗೆ ಸಾಗಲಿದೆ.

ವಿಶಿಷ್ಟ ರೀತಿಯ ಈ ಸೈಟಿಂಗ್ ತಿರಂಗಾ ಮ್ಯಾರಥಾನ್‌ನ್ನು ಡಿವೈಎಸ್‌ಪಿ, ಬಾಲರಾಜ್‌ರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಯುವಜನ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಎಂ.ಟಿ.ಮಂಜುನಾಥಸ್ವಾಮಿ, ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಅಧ್ಯಕ್ಷರಾದ ಎನ್.ಮಂಜುನಾಥ್, ಶಿವಮೊಗ್ಗ ಗುರುಪುರದಲ್ಲಿರುವ ಡೆಲ್ಲಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮುಖ್ಯಸ್ಥರಾದ ಆರ್.ಜಗದೀಶ್, ಕ್ಲಬ್ಬಿನ ಚೇರನ್ ಹಾಗೂ ಸಾನ್ವಿ ರೆಸಾರ್ಟ್‌ನ ಮಾಲೀಕರಾದ ಆರ್.ಸಂಜೀವ್, ಕ್ಲಬ್ಬಿನ ಅಧ್ಯಕ್ಷರಾದ ಶಿ.ಜು.ಪಾಶ, ಉಪಾಧ್ಯಕ್ಷರಾದ ಜಿ.ಪದ್ಮನಾಭ್, ಎಸ್.ಕೆ.ಗಜೇಂದ್ರಸ್ವಾಮಿ ಉಪಸ್ಥಿತರಿರುವರು ಎಂದು ಕ್ಲಬ್ಬಿನ ಕಾವ್ಯದರ್ಶಿ ಎಂ.ರವಿ ತಿಳಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button