ಸ್ಥಳೀಯ ಸುದ್ದಿಗಳು

ಸ್ವಾತಂತ್ರೋತ್ಸವದ ಅಂಗವಾಗಿ ಹಾಪ್ ಕಾಮ್ಸ್ ನಿಂದ 9‌ಮಳಿಗೆಗಳು ಶುಭಾರಂಭ

ಸುದ್ದಿಲೈವ್.ಕಾಂ/ಶಿವಮೊಗ್ಗ

75 ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಶಿವಮೊಗ್ಗದ ಹಾಪ್ ಕಾಮ್ಸ್ ನ ವತಿಯಿಂದ ಆ.15 ರಂದು ವಿವಿಧಡೆ ಹಾಪ್ ಕಾಮ್ಸ್ ಮಳಿಗೆ ತೆರೆಯಲಾಗಿದೆ ಹಾಪ್ ಕಾಮ್ಸ್ ಅಧ್ಯಕ್ಷ ಸೋಮಶೇಖರಪ್ಪ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ 7 ಮಳಿಗೆ ಶಿಕಾರಿಪುರದಲ್ಲಿ ಆ.17 ರಂದು ಎರಡು ಹಾಪ್ ಕಾಮ್ಸ್ ಮಳಿಗೆಯನ್ನ ಆರಂಭಿಸಲಾಗುವುದು. ಬಿಆರ್ ಪಿ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ವೈನ್ ಮತ್ತು ತರಕಾರಿ ಮಂಡಳಿಯನ್ನ ಆರಂಭಿಸಲಾಗಿದೆ. ರೈತರಿಂದ ಬೆಳೆಗಾರರವರೆಗೆ ಎಂಬ ಕಾನ್ಸೆಪ್ಟ್ ನಲ್ಲಿ ನಡೆಯುತ್ತಿದೆ ಎಂದರು.

ಈಗ 22 ಮಳಿಗೆಗಳಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾ‌ಹಾಪ್ ಕಾಮ್ಸ್ 100 ಮಳಿಗೆಗಳು ಹೊಂದುವ ಗುರಿ ಹೊಂದಿದೆ. 17 ಅಂಗಡಿಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೊಸದಾಗಿ ಜಿಲ್ಲೆಯ ಬೇರೆಡೆ ತಾಲೂಕುಗಳಲ್ಲಿ 8 ಮಳಿಗೆಗಳು ಆರಂಭಗೊಳ್ಳಲಿದೆ ಎಂದರು.

ತರಕಾರಿ ಈಮೊದಲು 15 ಸಾವಿರ ರೂ.ವಿನಲ್ಲಿ ಅಂಗಡಿ ತುಂಬಿಸಲಾಗುತ್ತಿತ್ತು. ಈಗ 50 ಸಾವಿರ ರೂ. ಹಣ ಬಂಡವಾಳಬೇಕಿದೆ. ಹಾಗಾಗಿ ಕಡಿಮೆ ಕ್ವಾಂಟಿಟಿ ತರಕಾರಿ ಕರಿದಿಸಿ ಮಾರಾಟ ಮಾಡಲಾಗುತ್ತಿದೆ. ಬೇಗ ಮಾಲುಗಳು ಖಾಲಿ ಆಗುತ್ತಿವೆ. ಹಾಗಾಗಿ ಎಲ್ಲಾ‌ ಹಾಪ್ ಕಾಮ್ಸ್ ನಲ್ಲಿ ಕೋಲ್ಡ್ ಸ್ಟೋರೇಜ್ ಇರುವಂತೆ ಮಾಡಲಾಗುವುದು ಎಂದರು.

23 ಅಂಗಡಿಗಳಿಗೆ ರೈತರಿಂದ ಖರೀದಿಸುವ ತರಕಾರಿ ಹಣ್ಣುಗಳನ್ನ ಸರಬರಾಜು ಮಾಡಲು ವಾಹನಗಳನ್ನ‌ಹಾಪ್ ಕಾಮ್ಸ್ ಹೊಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಪ್ ಕಾಮ್ಸ್ ಉಪಾಧ್ಯಕ್ಷ ಕೆ.ಜೆ.ನಾಗೇಶ್ ನಾಯ್ಕ್,, ನಿರ್ದೇಶಕ ಮೋಹನ್, ಡಾ.ಬಿ.ಡಿ.ಭೂಕಾಂತ್, ಡಿ.ಜಿ.ಕುಮಾರಸ್ವಾಮಿ, ಆರ್‌ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button