ತಾಲ್ಲೂಕು ಸುದ್ದಿ
ಹೊಸ ಸೇತುವೆ ಮುಳುಗಡೆ-ಭದ್ರಾವತಿಯಲ್ಲಿ ಗಂಜಿ ಕೇಂದ್ರ ಆರಂಭ

ಸುದ್ದಿಲೈವ್. ಕಾಂ/ಭದ್ರಾವತಿ
ಭದ್ರ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ನದಿಗೆ ಹರಿದು ಬರುತ್ತಿರುವ 47 ಸಾವಿರ ಕ್ಯೂಸೆಕ್ ನೀರಿನಿಂದಾಗಿ ಭದ್ರಾವತಿಯ ಮುಳುಗು ಸೇತುವೆ ಮುಳುಗಿದೆ. ರಸ್ತೆ ಸಂಚಾರ ನಿಷೇಧಿಸಲಾಗಿದೆ.
ಭದ್ರ ಜಲಾಶಯದಲ್ಲಿ 186 ಗರಿಷ್ಠ ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಬೆಳಿಗ್ಗೆ 184.2¼ ಅಡಿ ನೀರು ಸಂಗ್ರಹವಾಗಿತ್ತು, ಈಗ 184 ಅಡಿ ನೀರು ಬಾಕಿ ಇದೆ..2¼ನೀರು ಖಾಲಿ ಮಾಡಿಕೊಳ್ಳಲಾಗಿದೆ.
ರೆಡ್ ಅಲರ್ಟ್ ಹಿನ್ನಲೆಯಲ್ಲಿ ಜಲಾಶಯದ ಕೆಲ ಪ್ರಮಾಣದ ನೀರನ್ನ ಖಾಲಿಮಾಡಿಕೊಳ್ಳಲಾಗಿದೆ. ಈ ಹಿನ್ಬಲೆಯಲ್ಲಿ ಮುಳುಗುವ ಸೇತುವೆ ಮುಳುಗಿದೆ. ಸಂಚಾರ ಸ್ಥಗಿತಗೊಳಿಸಲಾಗಿದೆ.
ಗಂಜಿ ಕೇಂದ್ರ ಆರಂಭ
ಭದ್ರಾವತಿಯಲ್ಲಿ ಭದ್ರ ನದಿಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದ್ದು ಗಂಜಿ ಕೇಂದ್ರಗಳನ್ನ ಆರಂಭಿಸಲಾಗಿದೆ. ಭದ್ರಾವತಿಯ ಬಿಸಿಎಂ ಹಾಸ್ಟೆಲ್ ಗಳನ್ನ ತೆಗೆಯಲಾಗಿದೆ. 45 ನಿರಾಶ್ರಿತರು ಈ ಗಂಜಿಕೇಂದ್ರದಲ್ಲಿದ್ದಾರೆ.

