ಕ್ರೈಂ

ಮನೆಗಳ್ಳತನ ಪ್ರಕರಣ ಭೇದಿಸಲು ಹೊರಟ ಪೊಲೀಸರಿಗೆ ಪತ್ತೆಯಾಯಿತು ಲಕ್ಷಲಕ್ಷ!

ಸುದ್ದಿಲೈವ್.ಕಾಂ/ಶಿವಮೊಗ್ಗ

ಪೊಲೀಸರಿಗೆ ಫ್ರೀಹ್ಯಾಂಡ್ ಮಾಡಿದರೆ ಎಂತಹ ಪ್ರಕರಣವನ್ನು ಭೇದಿಸುತ್ತಾರೆ ಎಂಬ ಉದಾಹರಣೆಗೆ ಸಾಗರದ ಶ್ರೀಧರ ಕಾಲೋನಿಯಲ್ಲಿ ನಡೆದ ಪ್ರಕರಣವೂ ಸೇರ್ಪಡೆಗೊಳ್ಳುತ್ತದೆ. ಸಾಗರದ ಶ್ರೀಧರ‌ ನಗರ ಕಳವು ಮಾಡಿದ್ದ ಪ್ರಕರಣವನ್ನ ಬೆನ್ನು ಹತ್ತಿದ ಸಾಗರದ ಪೊಲೀಸರು ಮೊದಲು ಇಬ್ಬರು ಆರೋಪಿಗಳನ್ನ ಪತ್ತೆ ಮಾಡಿದ್ದಾರೆ.

ಪತ್ತೆಯಾದ ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಸಾಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶ್ರೀಧರ ನಗರ ಬಡಾವಣೆಯಲ್ಲಿ ಜುಲೈ 15 ರಂದು  ದೇವರಾಜ್ ಎಂಬುವರ ಮನೆಯಲ್ಲಿ ಕಳ್ಳತನವೊಂದು ನಡೆದು ಹೋಗಿರುತ್ತದೆ. ಮಗನನ್ನ ಅಡ್ಮಿಷನ್ ಮಾಡಲು ಮಂಗಳೂರಿಗೆ ಹೋಗಿದ್ದ ದೇವರಾಜ್ ಮನೆಯಲ್ಲಿ ಹೆಂಚು ತೆಗೆದು ಕಳವು ಮಾಡಲಾಗಿತ್ತು.

8000 ನಗದು ಹಾಗೂ 90 ಗ್ರಾಂ ಚಿನ್ನಾಭರಣವನ್ನ  (ಒಟ್ಟು 342,000/- ರೂ) ಕಳುವು ಮಾಡಲಾಗಿತ್ತು. ಪ್ರಕರಣವನ್ನ‌ ಬೇಧಿಸಿದ ಪೊಲೀಸರು ಅದೇ ಬಡಾವಣೆಯ ಶಿವರಾಜ್(23) ಹಾಗೂ ಸೂರನಗದ್ದೆಯ ದೇವರಾಜ್ ನನ್ನ ಬಂಧಿಸಿ ವಿಚಾರಣೆ ನಡೆಸುತ್ತಾರೆ.

ವಿಚಾರಣೆ ವೇಳೆ ಇಬ್ಬರು ಆರೋಪಿಗಳು ಕಳವು ಪ್ರಕರಣವನ್ನ ಬಾಯಿ ಬಿಟ್ಟಿದ್ದಾರೆ. ಇಬ್ಬರನ್ನೂ ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗಿದೆ.  ಕಾರ್ಗಲ್ ನ ವೃತ್ತ ಪೊಲೀಸ್ ಅಧಿಕಾರಿ ಕೆ.ವಿ.ಕೃಷ್ಣಪ್ಪ, ಸಾಗರ ಟೌನ್ ಪೊಲೀಸ್ ಪಿಐ ಸೀತಾರಾಮ್ ಜೆ.ಬಿ, ಪಿಎಸ್ ಐ ಟಿ.ಡಿ.ಸಾಗರರ್ಕರ್, ಕಾರ್ಗಲ್ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ್ ಈ ಪ್ರಕರಣನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button