ಕ್ರೈಂ

ಬೇಕರಿಗೆ ಹೋಗಿ ಹಣಕೊಡುವಾಗ ಗೊತ್ತಾಯಿತು ನೆಕ್ಲೆಸ್ ನಾಪತ್ತೆ ವಿಷಯ

ಸುದ್ದಿಲೈವ್. ಕಾಂ/ಶಿವಮೊಗ್ಗ

ಚಿಕ್ಕಮಗಳೂರಿನ ಮದುವೆಗೆ ಹೋಗಿದ್ದ ಮಲೇಬೆನ್ನೂರಿನ ಕುಟುಂಬ ವಾಪಾಸ್ ಮಲೇಬೆನ್ನೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ಶಿವಮೊಗ್ಗದ ನೆಂಟರ ಮನೆಗೆ ಸ್ವೀಟ್ ತೆಗೆದುಕೊಳ್ಳುವಾಗ ಪತ್ತೆಯಾಗುತ್ತೆ ನೆಕ್ಲೆಸ್ ನಾಪತ್ತೆ ಪ್ರಕರಣ.

ಮಲೇಬೆನ್ನೂರಿನ ಜಿಗಳೆ ಗ್ರಾಮದ ನಿವಾಸಿ ಜ್ಯೋತಿಕಲಾ ಎಂಬುವರು ಗಂಡ ಮತ್ತು ಮಗನೊಂದಿಗೆ ಮೊನ್ನೆ ತಮ್ಮಸಂಬಂಧಿಕರ ಮದುವೆಗೆಂದು ಚಿಕ್ಕಮಗಳೂರಿಗೆ ತೆರಳಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮದುವೆ ಮುಗಿಸಿಕೊಂಡು ವಾಪಾಸ್ ಮಲೇಬೆನ್ನೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಾರೆ.

ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಜ್ಯೋತಿಕಲಾರವರ ಅಣ್ಣನ ಮನೆಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಬರಲು ಬಸ್ ನಿಲ್ದಾಣದ ಬೇಕರಿ ಒಂದರಲ್ಲಿ ಸ್ವೀಟ್ ಖರೀದಿಸುತ್ತಾರೆ. ಈ ವೇಳೆ ಸ್ವೀಟ್ ನ ಬಿಲ್ ಕೊಡಲು ಪರ್ಸ್ ತೆಗೆಯುವಾಗ 1,80,000/- ರೂ ಮೌಲ್ಯದ 47 ಗ್ರಾಂನ ಬಂಗಾರದ ನೆಕ್ಲೆಸ್ ಕಳುವಾಗಿರುತ್ತದೆ.

ಮೂವರು ಜನರಿಗೆ ನೆಕ್ಸೆಸ್ ಕಳುವಾಗಿರುವ ಬಗ್ಗೆ ಶಾಕ್ ಆಗಿದ್ದು ಬಸ್ ನಲ್ಲಿ ಹುಡುಕೋಣವೆಂದು ಬಸ್ ನಿಲ್ಲುವ ಫ್ಲಾಟ್ ಫಾರಂಗೆ ಬಂದು ನೋಡಿದಾಗ ಬಸ್ ನಿಲ್ದಾಣದಿಂದ ಹೊರಟು ಹೋಗಿರುತ್ತದೆ. ಲಷ್ಕರ್ ಮೊಹಲ್ಲಾದಲ್ಲಿರುವ ಅಣ್ಣನ ಮನೆಗೆ ತೆರಳಿ ಅಣ್ಣ ರಾಘವೇಂದ್ರನಿಗೆ ವಿಷಯ ತಿಳಿಸುತ್ತಾರೆ. ಅಣ್ಣನ ಸಲಹೆ ಮೇರಿಗೆ ಜ್ಯೋತಿಕಲಾ ದೊಡ್ಡಪೇಟೆ ಪೊಲೀಸ್ಬಠಾಣೆಗೆ ದೂರು ನೀಡುತ್ತಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button