ಸ್ಥಳೀಯ ಸುದ್ದಿಗಳು

ಆಗಸ್ಟ್ ಮೊದಲವಾದರಲ್ಲಿ 97 ಮನೆಗಳು ಹಾನಿ, 132 ಮನೆಗಳು ಜಲಾವೃತ

ಸುದ್ದಿಲೈವ್.ಕಾ/ಶಿವಮೊಗ್ಗ

ಆಗಸ್ಟ್ ತಿಂಗಳಿನ ಆರಂಭದಲ್ಲಿಯೇ ಶಿವಮೊಗ್ಗ ಜಿಲ್ಲೆ ಭಾರಿ ಮಳೆಯಾಗಿದೆ. ಈ ತಿಂಗಳ 6 ದಿನಗಳಲ್ಲಿ 140 ಮಿಮಿ ಮಳೆಯಾಗಿದೆ.ಲಿಂಗನಮಕ್ಕಿ ಒಂದು ಹೊರತು ಪಡಿಸಿ ಉಳಿದ ಜಲಾಶಯಗಳು ಬಹತೇಕ ಭರ್ತಿಯಾಗಿವೆ.

ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆಯಾಗಿರಲಿಲ್ಲ. ಬದಲಿಗೆ ಜುಲೈನಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದೆ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 422 ಮಿಮಿ ವಾಡಿಕೆ ಮಳೆ ಇದ್ದರೆ 203.08 ಮಿಮಿ ಮಳೆ ಆಗಿದೆ. ಶೇ.56.8% ಮಳೆ ಕೊರತೆ ಆಗಿತ್ತು.

ಜುಲೈ ತಿಂಗಳಲ್ಲಿ ವಾಡಿಕೆ ಮಳೆ 765 ಮಿಮಿ ಮಳೆಯಾಗಬೇಕಿತ್ತು. ಆದರೆ ಜಿಲ್ಲೆಯಲ್ಲಿ 921 ಮಿಮಿ ಮಳೆ ಆಗಿದೆ. ಇದರಿಂದ 21% ಅಧಿಕ ಮಳೆಯಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಇದುವರೆಗೂ 141 ಮಿಮಿ ಮಳೆಯಾಗಬೇಕಿತ್ತು. ಆದರೆ 140 ಮಿಮಿ ಮಳೆಯಾಗಿದೆ.‌ಇಷ್ಟೆಲ್ಲಾ ಮಳೆ ಬಿದ್ದರೂ ಶೇ.1 ರಷ್ಟು ವಾಡಿಕೆ ಮಳೆಗಿಂತ ಕಡಿಮೆ ಮಳೆ ಉಂಟಾಗಿದೆ.

6 ದಿನಗಳಲ್ಲಿ ಮಳೆಯ ಹಾನಿಗಳೂ ಹೆಚ್ಚಾಗಿವೆ. ಪ್ರತಿ ತಾಲೂಕಗಳಲ್ಲೂ ಮಳೆಯ ಅಬ್ಬರ ಹೆಚ್ಚಿವೆ. 163 ಹಳ್ಳಿಗಳು ಮಳೆಯಿಂದಾಗಿ ಅನಾಹುತ ಸಂಭವಿಸಿದೆ. ಮನೆಯ ಗೋಡೆ ಬಿದ್ದವು, ಸಂಪೂರ್ಣ ಮನೆ ಹಾನಿಗೊಳಗಾದವವು ಸೇರಿ 97 ಮನೆಗಳು ಹಾಳಾಗಿವೆ. 132 ಮನೆಗಳಿಗೆ ಮಳೆ ನೀರು ಮುಗ್ಗಿದೆ. 266 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಮತ್ತು ಮೆಕ್ಕೆಜೋಳ ಅಧಿಕ ಮಳೆಯಿಂದ ಹಾನಿ ಉಂಟಾಗಿದೆ. 10 ವಿದ್ಯುತ್ ಕಂಬಗಳು ಹಾಳಾಗಿವೆ.

ಜಲಾಶಯಗಳು ಭರ್ತಿ

ಮಳೆಯ ಆರ್ತನಾದಕ್ಕೆ ಮಳೆಗಳು ಉಕ್ಕಿ ಹರಿಯುತ್ತಿವೆ. 1819 ಗರಿಷ್ಠ ಅಡಿ ನೀರು ಸಂಗ್ರಹದ  ಅಣೆಕಟ್ಟಿನಲ್ಲಿ 1801.35 ಅಡಿ ನೀರು ಸಂಗ್ರಹವಾಗಿದೆ. 30397 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇಷ್ಟು ಹೊತ್ತಿಗೆ 1810.25 ಅಡಿ ಅಷ್ಟು ನೀರು ಇತ್ತು.

ಅದರಂತೆ ಭದ್ರ ಜಲಾಶಯಕ್ಕೆ 31,069 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಿಗ್ಗೆ 10 ಗಂಟೆಗೆ 48 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತುಂಗ ಜಲಾಶಯ ಸಣ್ಣದಾದುದರಿಂದ‌ ಜಲಾಶಯ ಈಗಾಗಲೇ‌ಭರ್ತಿ ಇದೆ. 19448 ಕ್ಯೂ ಸೆಕ್ ನೀರು ಹರಿದು ಬಂದರೆ 33500 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ.

ಅಂಜನಾಪುರ ಜಲಾಶಯ 154.35 ಅಡಿ ನೀರು  ಸಾಮರ್ಥ್ಯದ ಜಲಾಶಯದಲ್ಲಿ 154.79 ಅಡಿ ನೀರು ಸಂಗ್ರಹವಿದೆ. 110 ಕ್ಯೂ ಸೆಕ್ ನೀರು ಹರಿದು ಹೋಗುತ್ತಿದೆ. ಅಂಬ್ಳಿಗೋಳ ಜಲಾಶಯ 193.52 ಗರಿಷ್ಠ ಎತ್ತರ ಸಾರ್ಥ್ಯವಿದ್ದು, 193.53‌ ಅಡಿ ನೀರು ಸಂಗ್ರಹವಾಗಿದೆ.

ಚಕ್ರ‌ನದಿಯ ಜಲಾಶಯದಲ್ಲಿ 580.57 ಗರಿಷ್ಠ ಅಡಿ ನೀರು ಸಂಗ್ರಹ ಸಾಮರ್ಥ್ಯ ವಿದ್ದರೆ 572.80 ನೀರು ಸಂಗ್ರಹವಾಗಿದೆ. 595 ಗರಿಷ್ಟ ಅಡಿ ನೀರು ಸಂಗ್ರಹದ ಸಾಮರ್ಥ್ಯವಿರುವ ಮಾಣಿ ಅಣೆಕಟ್ಟಿನಲ್ಲಿ 585.15 ಅಡಿ ಎತ್ತರ ನೀರು ಸಂಗ್ರಹವಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button