ರಾಜಕೀಯ

ಸಿದ್ದರಾಮೋತ್ಸವದ್ದಂತಹ ನೂರು ಉತ್ಸವಗಳನ್ನ ಬಿಜೆಪಿ ಮಾಡಿದೆ-ಈಶ್ವರಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ

ಸಿದ್ದರಾಮೋತ್ಸವ ಕುರಿತು ಚರ್ಚೆ ಬೇಡ, ರಾಷ್ಟ್ರದ್ರೋಹಿಗಳಿಗೆ ಬೆಂಬಲಿಸಬೇಡಿ ಎಂಬ ಸಲಹೆ ನೀಡಿದ್ದೆ ಕಾರ್ಯಕ್ರಮ ಮುಗಿದಿದೆ. 75 ವರ್ಷಾಚರಣೆ ಆಗಿದೆ ಮುಗಿದಿದೆ. ಸಂತೋಷ ಪಟ್ಟಿದ್ದಾರೆ ಎಲ್ಲರೂ ಖುಷಿಯಾಗಿರಲಿ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.

ಅವರು ಮಾಧ್ಯಮದೊಂದಿಗೆ ಮಾತನಾಡಿ ಸಿದ್ದರಾಮೋತ್ಸವದಿಂದ ಬಿಜೆಪಿಗೆ ಶಾಕ್ ಆಗಿದೆಯಾ ಎಂಬ ಹೇಳಿಕೆಗೆ ವ್ಯಂಗ್ಯವಾಡಿದ ಮಾಜಿ ಸಚಿವರು ಅವರ ಉತ್ಸವದಿಂದ, ನಾವು ನಿದ್ದೆ ಮಾಡ್ತಿಲ್ಲ, ತಿಂಡಿ ತಿಂತಿಲ್ಲ ಎಂದು ವ್ಯಂಗ್ಯವಾಡಿದರು. ಇಂತಹ ಉತ್ಸವವನ್ನ ಬಿಜೆಪಿ ನೂರು ಮಾಡಿದ್ದೇವೆ. ಒಟ್ಟಾಗಿ ಮಾಡಿದ್ದೇವೆ. ಕಾಂಗ್ರೆಸ್ ಒಟ್ಟಾಗಿ ಎಂಬುದು ಇಲ್ಲ. ಒಟ್ಟಾಗಿದ್ದೇವೆ ಎಂಬ ಕಾಂಗ್ರೆಸ್ ಹೇಳಿಕೆ ಸುಳ್ಳಾಗಿದೆ.

ರಾಹುಲ್ ಗಾಂಧಿ ಹೇಳಿ ತೋರಿಸಿದ ನಂತರ ಇಬ್ಬರು ನಾಯಕರು ಒಂದಾಗಿದ್ದಾರೆ. ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಒಂದಾಗಲ್ಲ. ಕಾಂಗ್ರೆಸ್ ಗೆ ಕನಸು ಬಹಳ ಬೀಳುತ್ತೆ. ಯಾವಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರೊಲ್ಲ ಎಲ್ಲವೂ ಕನಸೇ ಎಂದು ತೆಗಳಿದರು. ಸಿದ್ದರಾಮೋತ್ಸವ ಕುರಿತು ನನ್ನನ್ನ ಕೇಳಿದರೆ ನಾನು ಏನು ಹೇಳಲಿ ಕಾಂಗ್ರೆಸ್ ಅಯೋಗ್ಯರಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ರಾಜ್ಯದ ಜನತೆ ಕಿತ್ತು ಹಾಕಿದ್ದಾರೆ.ಆದರೆ ಕಾಂಗ್ರೆಸ್ ಭ್ರಮೆಯಲ್ಲಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತು ಡಿಕೆಶಿ ಮುಖ್ಯ ಮಂತ್ರಿ ಆಗೊದು ಇರಲಿ ಕಾಂಗ್ರೆಸ್ ಪಕ್ಷವೇ ಗೆದ್ದು ಬರೋದು ಡೌಟ್ ಆಗಿದೆ. ಎಲ್ಲಾ ಚುನಾವಣೆಗಳು, ಕಾರ್ಪರೇಷನ್, ಉಪ ಚುನಾವಣೆ, ಲೋಕ ಸಭೆ ಯಲ್ಲಿ ಕಾಂಗ್ರೆಸ್ ಸೋತಿದೆ. ಸೋತ ನಂತರ ಮತ್ತೊಂದು ಚುನಾವಣೆಗೆ ಸೋಲಲು ರೆಡಿಯಾಗಿ ನಿಲ್ಲುತ್ತದೆ. ಹಾಗಾಗಿ ಅವರು ಭ್ರಮೆಯಲ್ಲಿದ್ದಾರೆ ಎಂದು ದೂರಿದರು.

ಅಮಿತ್ ಶಾ ಡಿಪಾರ್ಟ್ ಮೆಂಟ್ ಕೆಲಸಕ್ಕೆ ಬಂದಿದ್ದರು ಹೋದರು. ಕಾಂಗ್ರೆಸ್ ಸಿದ್ದರಾಮಯೋತ್ಸವಕ್ಕೆ 75 ಕೋಟಿ ಹಣ ವ್ಯಯ ಮಾಡಿದ್ದಾರೆ. ಅವಕಾಶವಿರಲಿಲ್ಲ. ಅದನ್ನ‌ಅವರಿಗೆ ಕೇಳಬೇಕಿದೆ. ನನ್ನನ್ನ ಕೇಳಿದರೆ ನಾನು ಏನು ಹೇಳಲಿ ಎಂದು ದೂಷಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button