ರಾಜಕೀಯ
ನನ್ನನ್ನ ಕಿಡ್ನ್ಯಾಪ್ ಮಾಡಿಕೊಂಡು ಇಲ್ಲಿ ಕರೆದುಕೊಂಡು ಬಂದಿದ್ದಾರೆ-ಈಶ್ವರಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ನನ್ನನ್ನ ಕಿಡ್ನ್ಯಾಪ್ ಮಾಡಿಕೊಂಡು ಬಂದು ಇಲ್ಲಿ ಕೂರಿಸಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಕುದ್ದು ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಒತ್ತಾಯ ಪೂರಕವಾಗಿ ನೆಹರೂ ಒಳಾಂಗಣ ಕ್ರೀಡಾಂಗಣ ವೂಶು ಕಾರ್ಯಕ್ರಮದ ಉದ್ಘಾಟನೆಗೆ ಕರೆದುಕೊಂಡು ಬರಲಾಗಿದೆ ಎಂಬ ಹೇಳಿಕೆಯನ್ನ ನನ್ನನ್ನ ಕಿಡ್ನ್ಯಾಪ್ ಮಾಡಿಕೊಂಡುಕರೆದುಕೊಂಡು ಬರಲಾಗಿದೆ ಎಂದು ಹೇಳಿದರು.
ಬ್ಯುಸಿ ಶೆಡ್ಯೂಲ್ ನಡುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಾಗ ಮೆಗ್ಗಾನ್ ನಲ್ಲಿ ನಡೆಯುತ್ತಿರುವ ಲೆಂಗಿಕ ಕಿರುಕುಳ, ಲಂಚದ ಪ್ರಕರಣದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರು.
ಇವತ್ತು ಎಲ್ಲಾ ಸಮಾಜದ ಪ್ರಮುಖರೊಂದಿಗೆ ಸರ್ಕಾರದಿಂದ ಬಿಡುಗಡೆ ಆಗುವ ಎಲ್ಲಾ ಅನುದಾನದ ಬಗ್ಗೆ ಚರ್ಚೆ ಮಾಡಲಾಗಿತ್ತು. ಅಲ್ಲಿಂದ ಕಿಡ್ನ್ಯಾಪ್ ಮಾಡಿಕೊಂಡು ಬಂದರು. ಅದರ ಬಗ್ಗೆ ಚೆಕ್ ಮಾಡಿಲ್ಲ. ಚೆಕ್ ಮಾಡಿ ಕ್ರಮ ತೆಗೆದುಕೊಳ್ಳಲು ಸೂಚಿಸುವೆ ಎಂದು ಹೇಳಿದರು.

