ಸ್ಥಳೀಯ ಸುದ್ದಿಗಳು

ಸವಾಯಿಪಾಳ್ಯ, ವಾದಿಯೇ ಉದಾ, ನ್ಯೂ ಮಂಡ್ಲಿಯಲ್ಲಿ ಮಳೆಯಿಂದ ಅನಾಹುತ-ಹೆಚ್ ಡಿ ಕೆ ಯುವ ಬ್ರಿಗೇಡ್ ಎಚ್ಚರಿಕೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ವಾರ್ಡ್ ನಂಬರ್ 33 ರಲ್ಲಿ ಸವಾಯಿ ಪಾಳ್ಯ, ನ್ಯೂಮಂಡ್ಲಿ, ವಾದಿಏ ಉದಾ ಸಣ್ಣ ಮಳೆಗೂ ಮಳೆ ನೀರು ನುಗ್ಗುತ್ತಿದ್ದು ರಾಜಾಕಾಲುವೆಯ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯ‌ಬಗ್ಗೆ ಜಿಲ್ಲಾಧಿಕಾರಿಗಳು ಪಾಲಿಕೆಗೆ ಸೂಕ್ತ ಕ್ರಮ‌ಕೈಗೊಳ್ಳಲು ಕ್ರಮ ಕೈಗೊಳ್ಳಬೇಕಿದೆ ಎಂದು ಹೆಚ್ ಡಿಕೆ ಮಲ್ನಾಡ್ ಬ್ರಿಗೇಡ್ ಆಗ್ರಹಿಸಿದೆ.

ಬ್ರಿಗೇಡ್ ನ ಜಿಲ್ಲಾಧ್ಯಕ್ಷ ಎನ್ ಸಿ ಬ್ಗತ್ ಮೀಡಿಯಾ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಾಕಾಲುವೆಯಿಂದ ಮೊನ್ನೆ ಬಿದ್ದ ಮಳೆಯಿಂದಾಗಿ 23 ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗಳಿಗೆ ತಡೆಗೋಡೆ ರಚನೆ ಆಗಿಲ್ಲ. ಇಲ್ಲಿನ ನಿವಾಸಿಗಳು ತಡೆಗೋಡೆಗೆ ಬಹಳ ಬೇಡಿಕೆ ಇಟ್ಟಿದ್ದರು.

ಜಿಲ್ಲಾಧಿಕಾರಿಗಳು, ಪಾಲಿಕೆಯವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪದೇ ಪದೇ ನೀರು ನುಗ್ಗಿದರೆ ಜನ ಯಾರ ಬಳಿ ಹೋಗಬೇಕು ಎಂದು ಪ್ರಶ್ನಿಸಿದ ಎನ್ ಎಂ ಸಿಬ್ಗತುಲ್ಲಾ ಮುಂದಿನ ದಿನಗಳಲ್ಲಿ ಭಾರಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬ್ರಿಗೇಡ್ ಪರಮೇಶ್ವರ್, ಅನಿಲ್, ಸಯ್ಯದ್ ನಾಸೀರ್ ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button