ಮೆಗ್ಗಾನ್ ನಲ್ಲಿ ಗಂಡು ಮಗು ಹುಟ್ಟಿದರೆ 2000 ರೂ., ಹೆಣ್ಣು ಮಗು ಹುಟ್ಟಿದರೆ 1500 ರೂ.-ಇಬ್ಬರು ಸ್ಟಾಫ್ ನರ್ಸ್ ಅಮಾನತ್ತು

ಸುದ್ದಿಲೈವ್.ಕಾ/ಶಿವಮೊಗ್ಗ
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಒಂದಲ್ಲಾ ಒಂದು ಸುದ್ದಿಲಯಲ್ಲಿ ಇರಲಿಲ್ಲವೆಂದರೆ ಅದು ಮೆಗ್ಗಾನ್ ಆಸ್ಪತ್ರೆ ಎನಿಸಿಕೊಳ್ಳುವುದೇ ಇಲ್ಲ. ಲೈಂಗಿಕ ಕಿರುಕುಳ, ಔಷಧ ಅವ್ಯವಸ್ಥೆ, ಸಿಬ್ಬಂದಿಗಳನ್ನ ಹೊರ ಹಾಕುವ ಭೀತಿ ಹೀಗೆ ಒಂದಲ್ಲ ಒಂದು ಒಂದು ಸುದ್ದಿಗಳು ಸ್ಪೋಟದಂತೆ ಹೊರಬೀಳುತ್ತಿವೆ.
ಇಂದು ಲಂಚ ಕೇಳಿರುವ ಕುರಿತು ಸುದ್ದಿ ಹೊರಬಿದ್ದಿದೆ. ಕೇವಲ ಸ್ಟಾಫ್ ನರ್ಸ್ ನ ಮೇಲೆ ಈ ಆರೋಪ ಕೇಳಿ ಬರುತ್ತಿದೆ. ಆದರೆ ಯಾವುದೇ ದೊಡ್ಡ ಅಧಿಕಾರಿಗಳು ಪಾಲ್ಗೊಳ್ಳುವಿಕೆ ಇಲ್ಲದೆ ಒಳಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸ್ಟಾಫ್ ನರ್ಸ್ ಗಳು ಲಂಚ ಪಡೆಯುವ ಧೈರ್ಯ ಮಾಡುವುದಾದರೂ ಹೇಗೆ?
ಮೆಗ್ಗಾನ್ ಹೆರಿಗೆ ವಾರ್ಡ್ ಶರಾವತಿ ವಿಭಾಗದಲ್ಲಿ ಗಂಡು ಮಗು ಹುಟ್ಟಿದರೆ 2 ಸಾವಿರ ರೂ. ಹೆಣ್ಣು ಮಗು ಹುಟ್ಟಿದರೆ 1500 ರೂ ಲಂಚ ನೀಡುವ ಪರಿಪಾಟಲು ಇದೆ ಎಂಬ ಆರೋಪವಿತ್ತು. ಇಂದು ಆ ಆರೋಪ ಸಾಬೀತಾಗಿದೆ. ಇಬ್ವರು ಒಳಗುತ್ತಿಗೆ ನೌಕರರಾದ ಸ್ಟಾಫ್ ನರ್ಸ್ ಗಳನ್ನ ಲಂಚದ ಆರೋಪದ ಅಡಿ ಅಮಾನತ್ತುಗೊಳಿಸಲಾಗಿದೆ.
ಭದ್ರಾವತಿಯ ನಜ್ಮಾ ಎಂಬುವರಿಗೆ ಇಂದು ಬೆಳಿಗ್ಗೆ ಹೆರಿಗೆ ಆಗಿದೆ. ಬಟ್ಟೆ ಒಗೆಯಲು ಮತ್ತು ಇತರೆ ವೆಚ್ಚಕ್ಕಾಗಿ ನಜ್ಮಾ ಕುಟುಂಬದವರಿಗೆ ಬೇಡಿಕೆ ಇಡಲಾಗಿದೆ. ಬಡವರಾದ ನಜ್ಮಾರವರು ಕಡಿಮೆ ಮಾಡಿಕೊಳ್ಳಿ ಅಷ್ಟೊಂದು ಹಣವಿಲ್ಲವೆಂದು ಹೇಳಿ 600 ರೂ. ಹಣ ಕೊಡಲು ಮುಂದಾಗಿದ್ದಾರೆ.
600 ರೂ. ಮುಟ್ಟದ ಮೆಗ್ಗಾನ್ ಸ್ಟಾಫ್ ನರ್ಸ್ ಗಳು 1500 ಸಾವಿರ ಕಡಿಮೆ ಮುಟ್ಟೊಲ್ಲವೆಂದಿದ್ದಾರೆ. ಅಷ್ಟರಲ್ಲಿ ನಜ್ಮಾರವರ ಸಹೋದರ ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಮೆಗ್ಗಾನ್ ಅಧೀಕ್ಷಕ ಚಂದ್ರಮ್ಮ ಮತ್ತು ಇಂದ್ರಮ್ಮ ಎಂಬ ಇಬ್ಬರು ಸ್ಟಾಫ್ ನರ್ಸ್ ಗಳನ್ನ ಅಮಾನತ್ತಿನಲ್ಲಿಟ್ಟಿದ್ದಾರೆ.

