ಸುದ್ದಿ

ಭದ್ರಾವತಿ ರೆಡ್ ಅಲರ್ಟ್-ಮುನ್ನಚ್ಚರಿಕೆಯಲ್ಲಿದೆ ತಹಶೀಲ್ದಾರ್ ರ ತಂಡ

ಸುದ್ದಿಲೈವ್. ಕಾಂ/ಶಿವಮೊಗ್ಗ

ಭದ್ರ ಜಲಾಶಯದಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಹೆಚ್ಚಿನ ನೀರು ನದಿಗೆ ಬಿಡಲಾಗುತ್ತಿದೆ. ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಭದ್ರಾವತಿಯಲ್ಲಿ ಹೊಸ ಸೇತುವೆ ಮುಳುಗುವ ಹಂತಕ್ಕೆ ಬಂದು ತಲುಪಿದೆ.

ಭದ್ರ ಜಲಾಶಯಕ್ಕೆ 31‌ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳ ಹರಿವು ಬರುತ್ತಿದ್ದರೂ 36 ಕ್ಯೂ ಸೆಕ್ ನೀರು ಜಲಾಶಯಕ್ಕೆ ಬಿಡಲಾಗುತ್ತಿದೆ. ಹೊಸ ಸೇತುವೆ ಮುಳುಗಡೆ ಹಙತಕ್ಕೆ ತಲುಪಿದೆ. ಈಗಾಗಲೇ ಒಮ್ಮೆ ಅಧಿಕ ನೀರು ಬಂದಾಗ ಹ್ಯಾಂಡ್ ಗ್ರಿಪ್ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿತ್ತು. ಮತ್ತೆ ಮುಳುಗಡೆ ಆದರೆ ಮತ್ತೇನು ಅನಾಹುತ ಸಂಭವಿಸುತ್ತೆ ಕಾದು ನೋಡಬೇಕಿದೆ.

ಹವಮಾನ ಇಲಾಖೆ ಈಗಾಗಲೇ ಭದ್ರಾವತಿಯನ್ನ ರೆಡ್ ಅಲರ್ಟ್ ಎಂದು ಘೋಷಿಸಿದೆ. ಈ ಹಿನ್ನಲೆಯಲ್ಲಿ ಅಧಿಕ ಮಳೆ ಸಂಭವಿಸಿದರೆ ಭದ್ರಾವತಿಯ ಮತ್ತೆ ಕವಲುಗುಂದಿ ಸೇರಿದಂತೆ ಅನೇಕ ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ತಾಲೂಕಿನ ತಹಶೀಲ್ದಾರ್ ಪ್ರದೀಪ್ ನಿಕ್ಕಂ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹೈ ಅಲರ್ಟ್ ಇದೆ. ನೀರು ಹೆಚ್ಚಾಗಿ ಮುಳುಗಡೆ ಹಂತಕ್ಕೆ ತಲುಪಿದರೆ ಭದ್ರಾವತಿಯಲ್ಲಿ ಈಗಾಗಲೇ ಗಂಜಿ ಕೇಂದ್ರಗಳನ್ನ ತೆರೆಯಲು ಸಿದ್ಧತೆ ನಡೆದಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button