ಕ್ರೈಂ

ಪಿಡಬ್ಲೂಡಿ ಇಲಾಖೆ ನೌಕರ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ನಾಪತ್ತೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಸರ್ಕಾರಿ ನೌಕರನೋರ್ವ ಮನೆಬಿಟ್ಟು ಹೋಗಿರುವ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪತ್ನಿ ಮತ್ತು ಪುತ್ರರ ವಿರುದ್ಧ ಬೇಸರಿಸಿಕೊಂಡು ಮನೆ ಬಿಟ್ಟು ಹೋಗಿದ್ದಾರೆ.

ಪಿಡಬ್ಲೂಡಿ ಕ್ವಾಟ್ರಸ್ ನ ರಾಂಂದಿರದ ಬಳಿಯಿರುವ ಸಿ ಬ್ಲಾಕ್ ನಲ್ಲಿ ವಾಸವಾಗಿರುವ ಚಾಲಕ ಗೌಸ್ ಪೀರ್ ಎಂಬ 58 ವರ್ಷದ ವ್ಯಕ್ತಿ ತನ್ನ ಕುಟುಂಬದ ಸದಸ್ತರ ನಡುವೆ ಗಲಾಟೆ ಮಾಡಿಕೊಂಡು ಅಂಗಡಿಗೆ ಹೋಗಿ ಬರುವೆ ಎಂದು ತಿಳಿಸಿ ವಾಪಾಸ್ ಮನೆಗೆ ಬಂದಿಲ್ಲ.

ಗೌಸ್ ಪೀರ್ ಗೆ ಕಾಯಿಲೆ ಇದ್ದು ಒಂದು ತಿಂಗಳ ಹಿಂದೆ ಮದ್ಯ ಸೇವಿಸಿ ಬಂದಿದ್ದರು. ಪತ್ನಿ ಮತ್ತು‌ ಪುತ್ರ ಇರ್ಫಾನ್ ಕಾಯಿಲೆ ಇದ್ದರೂ ಮದ್ಯ ಯಾಕೆ ಸೇವಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇವರ ಪ್ರಶ್ನೆಗೆ ಗೌಸ್ ರೇಗಿದ್ದಾರೆ.

ಆದರೆ ಮರು ದಿನ ಗೌಸ್ ಪೀರ್ ಮಧ್ಯಾಹ್ನ ಊಟ ಮುಗಿಸಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆ ಬಿಟ್ಟು ಹೋದವರು ಮನೆಗೆ ವಾಪಾಸ್ ಆಗಿಲ್ಲ ಎಂದು ಅವರ ಪುತ್ರ ದೂರು ನೀಡಿದ್ದಾರೆ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಗೌಸ್ ಪೀರ್ ಮನೆ ಬಿಟ್ಟು ಹೋಗಿರ ಬಹುದು ಆದರೆ ಪಿಡಬ್ಲೂಡಿ ಕಚೇರಿಯಲ್ಲಿ ಒಬ್ಬ ನೌಕರ ಗೈರು ಹಾಜರಿಯಾದರೆ ಹೇಗೆ ಇಲಾಖೆ ನಿರ್ವಹಿಸಲಿದೆಎಂಬುದೇ ಕುತೂಹಲದ ಸಂಗತಿಯಾಗಿದೆ

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button