ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ-22 ಕಿಮಿ ಸಾಗಿದ ಪಾದಯಾತ್ರೆ

ಸುದ್ದಿಲೈವ್. ಕಾಂ/ಸಾಗರ
ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಇಂದು ಬಿಳಿಗಾರಿನಿಂದ ಪಾದಯಾತ್ರೆ ಆರಂಭವಾಗಿ ಕಾರ್ಗಲ್ ತಲುಪಿದೆ. ತುಮರಿಯ ಜನಪರ ಹೋರಾಟ ವೇದಿಕೆ ಹಾಗೂ ಕಾಗೋಡು ಜನಪರ ವೇದಿಕೆಯ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆದಿದೆ.
ಪಾದಯಾತ್ರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದ್ದಾರೆ. ಬಿಳಿಗಾರಿನಿಂದ ಸುಮಾರು 22 ಕಿ.ಮೀ ಸಾಗಿ ಪಾದಯಾತ್ರೆ ಕಾರ್ಗಲ್ ತಲುಪಿದೆ.
ಸಿಗಂದೂರು ದೇವಾಲಯ ಧರ್ಮದರ್ಶಿ ರಾಮಪ್ಪ, ಸಾಗರ ತಾ.ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೇ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನಾ .ಶ್ರೀನಿವಾಸ್ ಭಾಗಿದ್ದರು.
ಹಕ್ಕೋತ್ತಾಯ
ಸಾಗರದ ಬಾನುಕುಳಿ ಗ್ರಾ.ಪಂ ವ್ಯಾಪ್ತಿಯ ಉರಳುಗಲ್ಲು ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಪಾದಯಾತ್ರೆ ಮೂಲಕ ಒತ್ತಾಯಿಸಿದರು.
ಜೊತೆಗೆ ಉರಳುಗಲ್ಲು ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಉರಳುಗಲ್ಲು ಗ್ರಾಮಸ್ಥರ ಮೇಲಿನ ಸುಳ್ಳು ಕೇಸ್ ಹಿಂಪಡೆಯಲು ಒತ್ತಾಯಿಸಲಾಯಿತು.
ರೈತರು ಹಾಗೂ ಗ್ರಾಮಸ್ಥರ ಮೇಲೆ ದೌರ್ಜನ್ಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಯಿತು.

