ಡಾ.ಅಶ್ವಿನ್ ಹೆಬ್ಬಾರ್ ಸ್ಥಾನ ಖಾಲಿ ಖಾಲಿ,ರೋಗಿಗಳ ಪರದಾಟ-ಅರ್ದಂಬರ್ಧ ಆಪರೇಷನ್ ಕ್ಯಾನ್ಸರ್ ರೋಗಿಗೆ ಸಮಸ್ಯೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮುಂದೆ ಕನ್ನಡ ಕಾರ್ಮಿಕ ಕಟ್ಟಡ ರಕ್ಷಣ ವೇದಿಕೆಯು ಸಂತ್ರಸ್ತರೊಂದಿಗೆ ಪ್ರತಿಭಟನೆ ನಡೆಸಿದೆ. ವೈದ್ಯ ಅಶ್ವಿನ್ ಹೆಬ್ಬಾರ್ ರವರನ್ನ ತೆಗೆದುಹಾಕಿದ ಕಾರಣ ಮೆಗ್ಗಾನ್ ನಲ್ಲಿ ಸರ್ಜರಿ ವೈದ್ಯರು ಇಲ್ಲದ ಬಣಬಣವಾಗಿದ್ದು ಆ ಸ್ಥಾನಕ್ಕೆ ಕಳೆದ 20 ದಿನಗಳಿಂದ ಯಾರೂ ಬಾರದ ಹಿನ್ನಲೆಯಲ್ಲಿ ರೋಗಿಗಳು ನರಳುತ್ತಿರುವುದು ಬೆಳಕಿಗೆ ಬಂದಿದೆ.
ಗೋಪಾಳದ ರಂಗನಾಥ ಬಡಾವಣೆಯ ನಿವಾಸಿ ಮಂಜುಳಮ್ಮ ಜೂನ್ 25 ರಂದು ಮೆಗ್ಗಾನ್ ಗೆ ದಾಖಲಿಸಲಾಯಿತು. ರೋಗಿಯನ್ನ ನೋಡಿದ ವೈದ್ಯರುತೊಂದರೆಯಲ್ಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮಂಜುಳಮ್ಮಳಿಗೆ ಕರಳು ಕ್ಯಾನ್ಸರ್ ಉಂಟಾಗಿದೆ ಎಂದು ವೈದ್ಯ ಡಾ.ಅಶ್ವಿನ್ ತಿಳಿಸಿದ್ದಾರೆ.
ಮಂಜುಳಮ್ಮರಿಗೆ ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್, ಮಾಡಿದ್ದಾರೆ. ಮೂರು ಬಾರಿ ಸಿಟಿ ಸ್ಕ್ಯಾನಿಂಗ್ ಆಗಿದೆ. ತಕ್ಷಣವೇ ಆಪರೇಷನ್ ಮಾಡಲು ವೈದ್ಯರು ತಿಳಿಸಿದ್ದಾರೆ. ದೊಡ್ಡ ಕರಳು ಕಟ್ ಮಾಡಬೇಕಿದೆ ಎಂದು ಒಂದು ಆಪರೇಷನ್ ಮಾಡಿದ್ದಾರೆ. ಆದರೆ ಎರಡನೇ ಆಪರೇಷನ್ ಮಾಡುವ ವೇಳೆ ಡಾ.ಅಶ್ವಿನ್ ಹೆಬ್ಬಾರ್ ಲೈಂಗಿಕ ಕಿರುಕುಳದ ಹಿನ್ನಲೆಯಲ್ಲಿ ವೈದ್ಯರು ಅಮಾನತ್ತುಗೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಮಹಿಳೆಗೆ ಎರಡನೇ ಆಪರೇಷನ್ ಇಲ್ಲದಂತಾಗಿದೆ. ಮಗ ಕುಮಾರ ಸ್ವಾಮಿ ಮೊದಲು ಡಾ.ಶ್ರೀಧರ್ ಭೇಟಿಯಾದಾಗ ಯಾವುದೇ ಕರ್ಚಿಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.ಖಾಸಗಿ ಆಸ್ಪತ್ರೆಯವರು ಸಹ ರಿಪೋರ್ಟ್ ನೋಡಿ ಮತ್ತೆ ರಕ್ಷ ಪರೀಕ್ಷೆ ಮತ್ತು ಸಿಟಿ ಸ್ಕ್ಯಾನಿಂಗ್ ಮಾಡಿಸಿ ನಂತರ ಕೆಲ ಮೆಷನರಿಗಳು ಕಡಿಮೆ ಆಗಿವೆ ಮಣಿಪಾಲ್ ಗೆ ಸೇರಿಸಲು ತಿಳಿಸಿದ್ದಾರೆ.
ಖಾಸಗಿ ಕ್ಯಾನ್ಸರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಲು ಹೋದಾಗ 48 ದಿನ ಕರೆಂಟ್ ಶ್ರಸ್ತ ಚಿಕಿತ್ಸೆ ಮಾಡಿಸಿ ನಂತರ ಆಪರೇಷನ್ ಮಾಡಬೇಕೋ ಬೇಡವೋ ತಿಳಿಸುತ್ತೇವೆ ಎಂದಿದ್ದಾರೆ. ಒಬ್ಬ ವೈದ್ಯರು ಮಾಡಿದ ಶಸ್ತ್ರ ಚಿಕಿತ್ಸೆ ಇನ್ನೊಬ್ಬರು ಮುಟ್ಟುವುದಿಲ್ಲವೆಂಬುದು ತಿಳಿದು ಬರುತ್ತದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಾಟಾಳ್ ಮಂಜುನಾಥ್, ರವಿ, ಪರಶುರಾಮ್,ಸಂತ್ರಸ್ತೆ ಮಂಜಮ್ಮ, ಪುತ್ರ ಕುಮಾರ ಸ್ವಾಮಿ, ಸೋಮಣ್ಣ, ಮಧು ಹಾಗೂ ಇತರರು ಉಪಸ್ಥಿತರಿದ್ದರು.

