75 ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.8 ಮತ್ತು 15 ಬೈಕ್ ರ್ಯಾಲಿ ಮತ್ತು ಸ್ವಾತಂತ್ರ್ಯೋತ್ಸವ

ಸುದ್ದಿಲೈವ್.ಕಾಂ/ಶಿವಮೊಗ್ಗ
ದೇಶದ 75 ನೇ ವರ್ಷದ ಅಮೃತ ಮಹೋತ್ಸವವನ್ನ ಪ್ರಧಾನಿ ಮೋದಿಯವರು ಕರೆಕೊಟ್ಟಿದ್ದು, ಈ ಕಾರ್ಯಕ್ರಮದ ಹರ್ ಘರ್ ತಿರಂಗಾ ಕಾರ್ಯಕ್ರಮ ಜರುಗುತ್ತಿದೆ. ಶಿವಮೊಗ್ಗದಲ್ಲಿ ಬೈಕ್ ರ್ಯಾಲಿ, ಪಾಲಿಕೆಯ ಅಧಿಕಾರಿಗಳೊಂದಿಗೆ ಬೂತ್ ಮಟ್ಟದ ಕಾರ್ಯಕರ್ತರ ಸಹ ಭಾಗಿತ್ವದಲ್ಲಿ ಮನೆ ಮನೆಗೆ ದೇಶದ ರಾಷ್ಟ್ರಧ್ವಜವನ್ನ ಹಂಚಲಾಗುತ್ತಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ನಗರ ಘಟಕದ ಅಧ್ಯಕ್ಷ ಜಗದೀಶ್, ಆ. 13 ರಿಂದ 15 ರವರೆಗೆ ಬಾವುಟವನ್ನ ಹಾರಿಸುವ ಅಭಿಯಾನ ನಡೆಯುತ್ತಿದೆ. ಪ್ರತಿ ಮನೆಗಳಲ್ಲೂ ಬಾವುಟ ಹಾರಿಸಲಾಗುತ್ತಿದೆ. ಪ್ರತಿಭೂತ್ ನ ಪೇಜ್ ಪ್ರಮುಖ್ ಮೂಲಕ ಸಹಕಾರ ನೀಡಲಿದ್ದಾರೆ. ಆ.15 ರಂದು ಗೋಪಿ ವೃತ್ತದಲ್ಲಿ ನಡೆಯುವ ಅಮೃತ ಮಹೋತ್ಸವದ ಸ್ವಾತಂತ್ರ್ಯ ಮಹೋತ್ಸವದಲ್ಲಿ 299 ಬೂತ್ ನಲ್ಲಿ ಪೇಜ್ ಪ್ರಮುಖರ ನೇತೃತ್ವವದಲ್ಲಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಇದಕ್ಕೂ ಮೊದಲು, 3500 ಬೈಕ್ ರ್ಯಾಲಿ ನಡೆಯಲಿದೆ. ಎಂಆರ್ ಎಸ್ ಸರ್ಕಲ್ ನಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ವಿನೋಬ ನಗರದ ಪೊಲೀಸ್ ಚೌಕಿಯಲ್ಲಿ ರ್ಯಾಲಿ ಅಂತ್ಯಗೊಳ್ಳಲಿದೆ ಎಂದರು.
ಆ.15 ರಂದು ಸ್ವಾತಂತ್ರ್ಯೋತ್ಸವ ಜರುಗಲಿದೆ. ಈ ಸ್ವಾತಂತ್ರ್ಯೋತ್ಸವವು ಗೋಪಿ ವೃತ್ತದಲ್ಲಿ ಭಾಗಿಯಾಗಲಿದ್ದಾರೆ. ಈಶ್ವರಪ್ಪನವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಸಂಸದ ಬಿವೈ ರಾಘವೇಂದ್ರ, ಶಾಸಕ ಅಶೋಕ್ ನಾಯ್ಕ್, ಎಂಎಲ್ ಸಿ ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಈಶ್ವರಪ್ಪ, ಪುತ್ರ ಕಾಂತೇಶ್, ಜ್ಞಾನೇಶ್ವರ್ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಸಂತೋಷ್ ಬಳ್ಳೇಕೆರೆ ಮೊದಲಾದವರು ಉಪಸ್ಥಿತರಿದ್ದರು.

