ರಾಜಕೀಯ
ಆ. 9 ರಿಂದ 14 ರವರೆಗೆ ಮನೆಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ

ಸುದ್ದಿಲೈವ್. ಕಾಂ/ಶಿವಮೊಗ್ಗ
ಭಾರತದ ಒಕ್ಕೂಟಕ್ಕೆ ಸೇರಲು ಇನ್ಸ್ಟ್ರುಮೆಂಟ್ ಆಕ್ಸಶನ್ ಗೆ ಸಹಿ ಹಾಕಿದ ದಿನವಾದ ಆ.9 1947. ಈ ಒಕ್ಕೂಟಕ್ಕೆ ಮೊದಲು ಸೇರ್ಪಡೆಯ ಸಹಿ ಹಾಕಿದ್ದು ಕರ್ನಾಟಕ ರಾಜ್ಯ. ಈ ಬಗ್ಗೆ ಜಾಗೃತಿಗೊಳಿಸಲು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಮುಂದಾಗಿದೆ.
ಈ ಬಗ್ಗೆ ಮೀಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ಅಧ್ಯಕ್ಷ ವಾಟಾಳ್ ಮಂಜುನಾಥ್ ಮನೆ ಮನೆಗಳಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಸಮಗ್ರತೆಯನ್ನ ವಿಶ್ವಕ್ಕೆ ಸಾರಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಆ. 9 ರಿಂದ 14 ರವರೆಗೆ ಮನೆಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕನ್ನಡ ನಾಡಿನ ಪ್ರತಿಯೊಬ್ಬ ಪ್ರಜೆಯು ಪಾಲ್ಗೊಳ್ಳಬೇಕೆಂದು ವಾಟಾಳ್ ಮಂಜುನಾಥ್ ಮನವಿ ಮಾಡಿಕೊಂಡಿಕೊಂಡಿದ್ದಾರೆ.

