ಸ್ಥಳೀಯ ಸುದ್ದಿಗಳು

ಆಗಸ್ಟ್ 7 ಬೆಳಿಗ್ಗೆ 9 ಗಂಟೆಗೆ ಲೋಕಾರ್ಪಣೆಗೊಳ್ಳುತ್ತಿದೆ ಮೀಡಿಯಾ ಹೌಸ್-ಕೆ.ವಿ.ಶಿವಕುಮಾರ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಸಿಟಿ ಕ್ಲಬ್ ನ ಪಕ್ಕದಲ್ಲಿರುವ ಮೀಡಿಯಾ ಹೌಸ್ ನ್ನ ಆ.7 ರಂದು ಲೋಕಾರ್ಪಣೆಗೊಳ್ಳಲಿದ್ದು ಮಾಜಿ ಸಚಿವ ಈಶ್ವರಪ್ಪ ಉದ್ಘಾಟಿಸಲಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ಸುದ್ದಿಗೋಷ್ಠಿ, ಚರ್ಚೆ, ಸಂವಾದ ಹಾಗೂ ಇತರೆ ಕಾರ್ಯಕ್ರಮಗಳನ್ನ ನಡೆಸಲು ಮೀಡಿಯಾ ಹೌಸ್ ಲೋಕಾರ್ಪಣೆಗೊಳ್ಳಲಿದೆ ಎಂದರು.

ಈ ಕಾರ್ಯಕ್ರಮವು ಅಂದು ಬೆಳಿಗ್ಗೆ 9 ಕ್ಕೆ ಉದ್ಘಾಟನೆಗೊಳ್ಳಲಿದ್ದು, ಸಂಸದ ಬಿವೈ ರಾಘವೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್.ಸುಂದರೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ಜೆಡಿಎಸ್ ಶ್ರೀಕಾಂತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ವೈದ್ಯನಾಥ್ ಮಾತನಾಡಿ, ಸಮಾಜದಲ್ಲಿ ಗೊಂದಲ ಮೂಡಿಸಲು ಮೀಡಿಯಾ ಹೌಸ್ ಆರಂಭಕ್ಕೆ ಕಾರಣವೆಂದು ಕೆಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅಂತಹ ಯಾವ ಉದ್ದೇಶ ಮೀಡಿಯಾ ಹೌಸ್ ಆರಂಭಿಸು ಹಿಂದೆ ಇಲ್ಲವೆಂದರು. ಎಲ್ಲಾ ಸುದ್ದಿಗೋಷ್ಠಿಗಳಿಂದ ಪತ್ರಕರ್ತರು ವಂಚನೆ ಆಗದೆ ಇರುವ ಕಾರಣಕ್ಕೆ ಮೀಡಿಯಾ ಹೌಸ್ ಆರಂಭಗೊಳ್ಳುತ್ತಿದೆ.‌

ಮುಂದಿನ ದಿನಗಳಲ್ಲಿ ಮೀಡಿಯಾ ಹೌಸ್ ನಲ್ಲಿ ಮಾತ್ರ ಬಳಕೆಯಾಗದೆ ಇತರೆ ಸಾರ್ವಜನಿಕರಿಗೆ ಬಳಕೆಗೂ ಅನುಕೂಲವಾಗಲಿದೆ ಎಂದರು. ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಟೆಲೆಕ್ಸ್ ರವಿ ಮಾತನಾಡಿ, ಮೀಡಿಯಾ ಹೌಸ್ ಆರಂಭಿಸಿರುವುದು ಕೇವಲ ಸಾರ್ವಜನಿಕರಿಗೆ ಅನುಕೂಲವಲ್ಲದೆ ಮಾಧ್ಯಮದವರಿಗೂ ಅನುಕೂಲವಾಗಲಿ ಎಂಬ ಸದುದ್ದೇಶವಾಗಿದೆ ಎಂದರು.

ಮೀಡಿಯಾ ಹೌಸ್ ನ ಲೆಕ್ಕ ಪತ್ರ ಸಾರ್ವಜನಿಕವಾಗಿರುತ್ತದೆ. ಔಪಚಾರಿಕವಾಗಿ ಭಾನುವಾರ ಉದ್ಘಾಟನೆಗೊಳ್ಳಲಿದೆ.‌ ಎಲ್ಲಾ ಜನಪ್ರತಿನಿಧಿ, ಸಂಘ ಸಂಸ್ಥೆಗಳನ್ನ ಆಹ್ವಾನಿಸಲಾಗಿದೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button