ಕುವೆಂಪು ವಿವಿಯ ಹೊರಗುತ್ತಿಗೆ ನೌಕರನ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳದ ಆರೋಪ

ಸುದ್ದಿಲೈವ್.ಕಾಂ/ಭದ್ರಾವತಿ
ಕುವೆಂಪು ವಿಶ್ವವಿದ್ಯಾಲಯದ ಹೊರಗುತ್ತಿಗೆ ಆಧಾರದ ಮೇರೆಗೆ ಅಟೆಂಡರ್ ಕೆಲಸ ಮಾಡುತ್ತಿರುವ ಪ್ರವೀಣ್ ಕುಮಾರ್ ಮತ್ತು ಅವರ ತಂದೆ ತಾಯಿ ತಂಗಿ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ದಾಖಲಾಗಿದೆ.
ಹೊರಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿರುವ ಅಟೆಂಡರ್ ಪ್ರವೀಣ್ ಕುಮಾರ್ ಕೆಲಸ ಖಾಯಂಗಾಗಿ 3 ಲಕ್ಷ ಹಣ ತೆಗೆದುಕೊಂಡು ಬರುವಂತೆ ಕಾಟಕೊಟ್ಟಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ. 2019 ರಲ್ಲಿ ಮದುವೆಯಾದಾಗ 33.380 ಗ್ರಾಂ ಚಿನ್ನದ ಬ್ರಾಸ್ ಲೈಟ್ ಮತ್ತು 8 ಗ್ರಾಂ ಬಂಗಾರದ ಉಂಗುರ ಮತ್ತು ಮೂರು ಲಕ್ಷ ರೂ ನಗದು ನೀಡಿ ಅವರ ಮಾವ ಮತ್ತು ಅತ್ತೆ ಅದ್ದೂರಿ ಮದುವೆ ಮಾಡಿಕೊಟ್ಟಿದ್ದರು ಎಂದು ಪ್ರವೀಣ್ ಕುಮಾರ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಮೂರು ವರ್ಷದಿಂದ ಮಕ್ಕಳಾಗದೆ ಇರುವುದಕ್ಕೆ ಪತಿ ಸೇರಿ ಅತ್ತೆ, ಮಾವ,ನಾದನಿ ಮತ್ತು ಪತಿಯ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಇದಕ್ಕಾಗಿ ಮಾಟ ಮಂತ್ರವನ್ನೂ ತನ್ನ ಗಂಡನ ಕುಟುಂಬ ಮಾಡಿಸಿತ್ತು ಎಂಬುದು ಪ್ರವೀಣ್ ಕುಮಾರ್ ಪತ್ನಿ ಆರೋಪಿಸಿದ್ದಾರೆ.
ಈ ಮಧ್ಯೆ ವಿಶ್ವ ವಿದ್ಯಾನಿಲಯದಲ್ಲಿ ಕೆಲಸ ಖಾಯಂ ನೌಕರಿ ಪಡೆಯಲು 3 ಲಕ್ಷ ರೂ. ಹಣ ಬೇಕಿದ್ದು ಆ ಹಣವನ್ನನಿನ್ನ ತವರಿನಿಂದ ತೆಗೆದುಕೊಂಡು ಬರುವಂತೆ ಪ್ರವೀಣ್ ಪೀಡಿಸಿದ್ದಾನೆ. ಇದರ ಜೊತೆಗೆ ಮಕ್ಕಳಾಗಿಲ್ಲದ ಕಾರಣ ಶಿವಮೊಗ್ಗದ ಪ್ರಖ್ಯಾತ ವೈದ್ಯರ ಬಳಿ ತೋರಿಸಿಕೊಂಡ ವಿವಾಹಿತ ಮಹಿಳೆಗೆ ವೈದ್ಯರು ಪತಿಯನ್ನ ಕರೆದುಕೊಂಡು ಬರಲು ಸಲಹೆ ನೀಡಿದ್ದಾರೆ.
ಆದರೆ ಪ್ರವೀಣ್ ಕುಮಾರ್ ವೈದ್ಯರ ಬಳಿ ಹೋಗಲು ನಿರಾಕರಿಸಿದ್ದಾನೆ. ಈ ನಡುವೆ ಪ್ರವೀಣ್ ಕುಮಾರ್ ದಿಡೀರ್ ಅಂತ ಮೂರು ದಿನ ಮನೆಗೆ ಬಂದಿಲ್ಲವೆಂದು ಪತ್ನಿ ಆರೋಪಿಸಿದ್ದು ಮೂರು ದಿನದ ನಂತರಬಂದಪ್ರವೀಣ್ ಕುಮಾರ್ ಪತ್ನಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾಳೆ.
ಈ ವಿಷಯದಲ್ಲಿ ಪತಿ ಪ್ರವೀಣ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಮಾಂಗಲ್ಯ ಸರ ಮತ್ತು ಮೊಬೈಲ್ ಬಿದ್ದುಹೋಗಿದೆ. ವಿವಾಹಿತ ಮಹಿಳೆಯ ತವರುಮನೆಯವರು ಬಂದು ಸಂಭಾಳಿಸಲು ಯತ್ನಿಸದರೂ ಯಾವ ಪ್ರಯತ್ನವೂ ಫಲಕೊಡಲಿಲ್ಲ.
ಈ ಪ್ರಕರಣ ಭದ್ರಾವತಿ ಗ್ರಾಮಾಂತರಪೊಲೀಸ್ ಠಾಣೆಯಲ್ಲಿ ವಿವಾಹಿತ ಮಹಿಳೆ ದೂರು ನೀಡಿದ್ದರು. ಆಗ ಪೊಲೀಸರು ಈ ವಿಚಾರದಲ್ಲಿ ಪ್ರವೀಣ್ ಕುಮಾರ್ ನ ಕುಟುಂಬವನ್ನ ಕರೆಯಿಸಿ ಬುದ್ದಿವಾದ ಹೇಳಿ ಎರಡು ಮೂರು ದಿನಗಳ ನಂತರ ಮನೆಗೆ ಕರೆದುಕೊಂಡು ಹೋಗುವಂತೆ ಪ್ರವೀಣ್ ಗೆ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದರು.
ಆದರೆ ಪ್ರವೀಣ್ ವಕೀಲರ ಮೂಲಕ ವಿಚ್ಛೇಧನದ ನೋಟೀಸ್ ಕಳುಹಿಸಿದ್ದನು. ವಾರವಾದರೂ ಬಾರದ ಪತಿಯ ಮನೆಗೆ ಆತನ ಪತ್ನಿಯನ್ನ ಕರೆದುಕೊಂಡು ಅವರ ತವರು ಮನೆಯವರು ಬಿಆರ್ ಪಿಯಲ್ಲಿರುವ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಮನೆಯನ್ನ ಬೀಗ ಹಾಕಿಕೊಂಡು ಪ್ರವೀಣ್ ಕುಮಾರ್ ಕುಟುಂಬ ಪಕ್ಕದ ಮನೆಯಲ್ಲಿರುವ ಚಿಕ್ಕಪ್ಪನಮನೆಗೆ ತೆರಳಿದ್ದರು.
ಮನೆಗೆ ಕಾಲಿಡಲು ಬಿಡೊಲ್ಲ. ಎಲ್ಲವನ್ಬೂ ಕೋರ್ಟ್ ನಲ್ಲಿ ತೀರ್ಮಾನವಾಗಲಿ ಎಂದು ಹೇಳಿಕಳುಹಿಸಿದ್ದಾರೆ. ಇಲ್ಲಿಂದ ಮತ್ತೆ ಭದ್ರಾವತಿಯ ಮಹಿಳಾ ಸಾತ್ವಾನ ಕೇಂದ್ರದ ಮೊರೆ ಹೋದರೂ ಅಲ್ಲಿಗೂ ಬಾರದ ಪ್ರವೀಣ್ ಕುಮಾರ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಸಾಂತ್ವಾನ ಕೇಂದ್ರ ಸೂಚಿಸಿದೆ.
ಮಹಿಳೆಯ ಎಲ್ಲಾ ಪ್ರಯತ್ನಗಳು ಮುರಿದ ಬಿದ್ದ ಹಿನ್ನೆಲೆಯಲ್ಲಿ ಮಹಿಳೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ, ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮಾನಸಿಕ ಕಿರುಕುಳದ ಆರೋಪದ ಅಡಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

