ಸ್ಥಳೀಯ ಸುದ್ದಿಗಳು
ಅರ್ಧಗಂಟೆಯ ಮಳೆ ಸೃಷ್ಠಿಸಿದ ಅನಾಹುತ

ಸುದ್ದಿಲೈವ್.ಕಾಂ/ಶಿವಮೊಗ್ಗ/ಭದ್ರಾವತಿ
ಅರ್ಧಗಂಟೆಯ ಮಳೆ ಹಲವೆಡೆ ನೀರು ನಿಂತು ಅನಾಹುತಗಳನ್ನ ಸೃಷ್ಠಿಸಿದೆ. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಸಂಜೆ ಸುರಿದ ಮಳೆ ಅಕ್ಷರಶಃ ಜನರನ್ನ ಆತಂಕಕ್ಕೆ ಈಡು ಮಾಡಿದೆ.
ಭದ್ರಾವತಿಯ ಬಿಳಕಿ ಕ್ರಾಸ್ ಬಳಿ ಮೊಣಕಾಲು ಮಟ್ಟ ನೀರು ನಿಂತು ವಾಹನ ಸವಾರರು ಪರದಾಡುವಂತೆ ಮಾಡಿದೆ. ಏನಪ್ಪ ಅರ್ಧಗಂಟೆ ಬಿದ್ದ ಮಳೆ ಇಷ್ಟೊಂದೆಲ್ಲಾ ಅನಾಹುತ ಸೃಷ್ಟಿ ಮಾಡಿದೆಯಾ ಎಂದು ಓದುಗರು ಹುಬ್ಬೇರಿಸಬಹುದು. ಆದರೆ ಮಳೆ ನೀರು ಚಾನೆಲ್ ನೀರು ಸೇರಿ ಅನಾಹುತ ಸೃಷ್ಠಿಸಿದೆ.
ಅದರಂತೆ ಶಿವಮೊಗ್ಗದ ಬೈಪಾಸ್ ರಸ್ತೆಯ ಕಿಯಾ ಷೋ ರೂಮ್ ಮುಂಭಾಗದ ಅರ್ಧ ಭಾಗಕ್ಕಿಂತ ಜಾಸ್ತಿ ಮುಳುಗಡೆ ಆಗಿದೆ. ಚಾನೆಲ್ ನಿಂದ ನೀರು ಸತತವಾಗಿ ಹರಿದು ಮನೆಗಳಿಗೂ ನೀರು ನುಗ್ಗಿದೆ. ಇಲ್ಲೊಂದು 25 ಮನೆಗಳಿಗೆ ನೀರು ನುಗ್ಗಿದೆ.
ಎನ್ ಟಿ ರಸ್ತೆ, ಆರ್ ಎಂಎಲ್ ನಗರದಲ್ಲಿನ ಕೆಲ ಅಂಗಡಿಗಳಿಗೂ ನೀರು ನುಗ್ಗಿರುವುದಾಗಿ ತಿಳಿದುಬಂದಿದೆ.

