ಕ್ರೈಂ

ರಸ್ತೆ ಅಪಘಾತದಲ್ಲಿ ಚರಂಡಿಗೆ ಬಿದ್ದ ಯುವಕನ ಮೇಲೆ ನೀರು ಹರಿದು ಸಾವು?

ಸುದ್ದಿಲೈವ್.ಕಾಂ/ಸಾಗರ

ಅಧಿಕ ಮಳೆಯಿಂದಾಗಿ ಚರಂಡಿಗೆ ಬಿದ್ದ ಯುವಕನ ಮೇಲೆ ನೀರು ಹರಿದು ಮೇಲೇಳಲು ಆಗದೆ ಪ್ರಾಣ ಕಳೆದುಕೊಂಡಿರುವ ಘಟನೆ ಸಾಗರ ತಾಲೂಕು ಕೊರ್ಲಿಕೊಪ್ಪದದಲ್ಲಿ ನಡೆದಿದೆ.

ಅಜಿತ್ ಎಂಬ 19 ವರ್ಷದ ಯುವಕನಾಗಿದ್ದು ಮನೆಯಲ್ಲಿ ಯಾರಿಗೋ ಹುಷಾರಿಲ್ಲ ಎಂದು ಹೇಳಿ ತ್ಯಾಗಾರ್ತಿಯ ಶಿವಕುಮಾರ್ ಹತ್ತಿರ ಮೊನ್ನೆ ರಾತ್ರಿ 10 ಗಂಟೆಗೆ ಕೆಎ 15 ಇ ಬಿ 3547 ಕ್ರಮಸಂಖ್ಯೆಯ ಬಜಾಜ್ ಡಿಸ್ಕವರಿ ಬೈಕ್ ಪಡೆದು ಸವಾರಿ ಮಾಡಿಕೊಂಡು ಕೊರ್ಲಿಕೊಪ್ಪದ ಗ್ರಾಮದೇವತೆಯ ದೇವಸ್ಥಾನದ ಬಳಿ ಅಪಘಾತ ಮಾಡಿಕೊಂಡಿದ್ದನು.

ಅಧಿಕ ಮಳೆ ಬೀಳುತ್ತಿದ್ದ ಪರಿಣಾಮ ಬೈಕ್ ಅತಿ ವೇಗದಲ್ಲಿ ಇದ್ದ ಕಾರಣ ನಿಯಂತ್ರಣಕ್ಕೆ ಬರಲಿಲ್ಲ. ನಿಯಂತ್ರಣ ಕಳೆದುಕೊಂಡ ಬೈಕ್ ಸ್ಕಿಡ್ ಆದ ಪರಿಣಾಮ ಅಜಿತ್ ಬೈಕ್ ಸಮೇತ ರಸ್ತೆಯ ಪಕ್ಕದಲ್ಲಿದ್ದ ಚರಂಡಿಯಲ್ಲಿ ಬಿದ್ದಿದ್ದನು

ಅಲ್ಲೇ ಇದ್ದ ಪಕ್ಕದ ಮನೆಯ ಗಣಪತಿಯವರು ಮಧ್ಯರಾತ್ರಿ 1-30 ಕ್ಕೆ ಮೂತ್ರ ವಿಸರ್ಜನೆಗೆಂದು ಎದ್ದು ಬಂದು ನೋಡಲಾಗಿ ಅಜಿತ್ ಮೋರಿಯಲ್ಲಿ ಬಿದ್ದಿದ್ದು ಕಂಡಿದ್ದಾರೆ. ಆತನ ಜೇಬಿನಲ್ಲಿದ್ದ ಚೀಟಿ ಒಂದು ಈ ವೇಳೆ ಸಹಾಯಕ್ಕೆ ಬಂದಿದ್ದು ಚೀಟಿ ನೋಡಿ ಆತನ ಮನೆಯವರಿಗೆ ಕರೆ ಮಾಡಿ ಅಜಿತ್ ಸಾವಿನ ವಿಷಯ ತಿಳಿಸಿದ್ದಾರೆ.

ಮನೆಯವರು ಬಂದು ನೋಡಿದಾಗ 19 ವರ್ಷದ ಯುವಕ ತಲೆಗೆ ಗಾಯಗೊಂಡು, ಕೈಕಾಲು ತರುಚಿದ್ದು ಶವವಾಗಿ ಪತ್ತೆಯಾಗಿದ್ದಾನೆ. ಅಧಿಕ ಮಳೆಯಿಂದಾಗಿ ಆತನ ಮೈ ಮೇಲೆ ಹರಿದ ನೀರಿನಿಂದ ಮೇಲೇಳಲು ಆಗದೆ ಅಜಿತ್ ಪ್ರಾಣ ಬಿಟ್ಟಿದ್ದಾನೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button