ದಾವಣಗೆರೆಯಿಂದ ಬಂದ ಕೂಲಿ ಕಾರ್ಮಿಕನನ್ನ ದೋಚಿಕೊಂಡು ಹೋದ ಅಪರಿಚಿತರು

ಸುದ್ದಿಲೈವ್.ಕಾಂ/ಶಿವಮೊಗ್ಗ
ಮದ್ಯದಂಗಡಿಯಲ್ಲಿ ಮಾತನಾಡಿಸಿಕೊಂಡು ಬಂದ ಅಪರಿಚಿತರು ಕೂಲಿ ಕಾರ್ಮಿಕನನ್ನ ರಾಬರಿ ಮಾಡಿಕೊಂಡು ಪರಾರಿಯಾಗಿದ್ದಾರೆ. ಬೇರೆ ಊರಿನಿಂದ ಬಂದಿದ್ದ ಕಾರ್ಮಿಕನ ಬಳಿಯಿದ್ದ 20 ಸಾವಿರ ರೂ.ಗಳನ್ನ ಕಿತ್ತುಕೊಂಡು ಹೋಗಿದ್ದಾರೆ.
ಮ್ಯಾಕ್ಸ್ ನಲ್ಲಿ ಸ್ನೇಹಿತನ ಪತ್ನಿಗೆ ಮಗುವಾಗಿದ್ದು ಮಗುವನ್ನ ನೋಡಿಕೊಂಡು ಹೋಗಲು ದಾವಣಗೆರೆಯ ಕೊಂಡಜ್ಜಿ ವೃತ್ತದ ಬಳಿಯ ನಿವಾಸಿ ವಿನಾಯಕ.ಸಿ ಎಂಬುವರು ಶಿವಮೊಗ್ಗಕ್ಕೆ ಬಂದು ಆಸ್ಪತ್ರೆಗೆ ಭೇಟಿ ನೀಡಿ ಮಗುವನ್ನ ನೋಡಿ ಕೊಂಡು ವಾಪಾಸ್ ಬಸ್ ನಿಲ್ದಾಣದಕ್ಕೆ ಬಂದಿದ್ದಾರೆ. ಅಲ್ಲೇ ಇದ್ದ ಎನ್ ಟಿ ರಸ್ತೆಯ ವೈನ್ ಶಾಪ್ ಗೆ ತೆರಳಿ ಮದ್ಯ ಸೇವಿಸಲು ಮುಂದಾಗಿದ್ದಾರೆ.
ಮದ್ಯ ಸೇವಿಸಿ ಹೊರಬರುವಾಗ ಬಾರ್ ನಲ್ಲಿ ಪರಿಚಯವಾದ ಇತರೆ 4 ಅಪರಿಚಿತರು ವಿನಾಯಕರ ಜೊತೆ ಮಾತನಾಡಿಸಿಕೊಂಡೆ ಹೊರ ಬಿದ್ದಿದ್ದಾರೆ. ವೈನ್ ಶಾಪ್ ನಿಂದ ಸ್ವಲ್ಪ ಮುಂದು ಹೋಗುತ್ತಿದ್ದಂತೆ ವಿನಾಯಕನ ಪ್ಯಾಂಟ್ ಜೇಬಿಗೆ ಕೈಹಾಕಿ 20 ಸಾವಿರ ರೂ ಹಣವನ್ನ ಕಿತ್ತುಕೊಂಡು ಹೋಗಿದ್ದಾರೆ.
ಕುಡಿದ ನಶೆ, ಹಣ ಕಳೆದುಕೊಂಡ ಗಾಬರಿಯಿಂದ ನಲುಗಿ ಹೋದ ವಿನಾಯಕ ನಿನ್ನೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ರಾಬರಿಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

