ಕ್ರೈಂ

ಹಣದ ವಿಚಾರದಲ್ಲಿ ನಡೆಯಿತು ಕಿರಣ್ ಯಾನೆ ಪೂಚಿ ಕೊಲೆ-ಮೃತನ ತಾಯಿಯಿಂದ ದೂರು

ಸುದ್ದಿಲೈವ್.ಕಾಂ/ಶಿವಮೊಗ್ಗ

ಕಿರಣ್ ಯಾನೆ ಪೂಚಿಯ ಕೊಲೆ ನಡೆದ ಘಟನೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತನ ತಾಯಿ ಮಂಜುಳಮ್ಮ ಕೊಲೆಗಾರರ ವಿರುದ್ಧ ಕಾನೂನು ಜರುಗಿಸುವಂತೆ ಕೋರಿ ಎಫ್ಐಆರ್ ದಾಖಲಿಸಿದ್ದಾರೆ.

ಪಾನಿಪೂರಿ ತಿನ್ನಲು ಸಂತ್ರಸ್ತನ ಮನೆಗೆ ಬಂದ ಕಾರ್ತಿಕ್ ಮತ್ತು ಪ್ರಜ್ವಲ್ ಯಾನೆ ಚಿಂಟು ಹೊಸಮನೆ 6 ನೇ ತಿರುವಿನಲ್ಲಿರುವ ಕಿರಣ್ ಮನೆಗೆ ಬಂದು ಕರೆದುಕೊಂಡು ಹೋಗಿದ್ದು ರಾತ್ರಿ ಕಿರಣ್ ಮನೆಗೆ ವಾಪಾಸಾಗಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಾವಾಗ ಮನೆಯ ಬಳಿ ಪೊಲೀಸರು ಬಂದು ಮಂಜುಳಮ್ಮರಿಗೆ ನಿಮ್ಮ ಮಗನನ್ನ ಗಾಡಿಕೊಪ್ಪದ ಬಳಿ ಕೊಲೆ ಮಾಡಿದ್ದಾರೆ ಎಂದು ಹೇಳಿದಾಕ್ಷಣ ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಕಿರಣ್ ಶವವಾಗಿ ಪತ್ತೆಯಾಗಿದ್ದ. ನಂತರ ವಿಚಾರಿಸಿದಾಗ ಪ್ರಜ್ವಲ್, ಕಾರ್ತಿಕ್ ಮತ್ತು ಕಿರಣ್ ನಡುವೆ ಹಣದ ವಿಚಾರದಲ್ಲಿ ಕೊಲೆಯಾಗಿರುವುದು ತಿಳಿದು ಬಂದಿದೆ ಎಂದು ಮಂಜುಳಮ್ಮ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.

ಆ.3 ರ ಬೆಳಗ್ಗಿನ ಜಾವ 12-30 ರ ಸಮಯದಲ್ಲಿ ಮದ್ಯ ಕುಡಿದು ಪ್ರಜ್ವಲ್ ಮತ್ತು ಕಾರ್ತಿಕ್ ಕಿರಣ್ ಮೇಲೆ ಬಾಟಲಿಯಿಂದ ಹತ್ಯೆ ಮಾಡಿದ್ದು ನಂತರ ಕಲ್ಲಿಗೆ ಆತನ ತಲೆಯನ್ನ ಜಜ್ಜಿ ಕೊಲೆ ನಡೆದಿರ ಬಹುದೆಂದು ಅಂದಾಜಿಸಲಾಗಿದೆ. ತಡ ರಾತ್ರಿ ನಡೆದ ಈ ಘಟನೆ ಇಬ್ಬರು ಆರೋಪಿಗಳು ಖುದ್ದಾಗಿ ವಿನೋಬ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗದ ವರೆಗೆ  ಯಾರಿಗೂ ತಿಳಿದಿರಲಿಲ್ಲ.

ಪೊಲೀಸ್ ಠಾಣೆಗೆ ಬಂದ ಕಾಲೇಜು ಹುಡುಗರು ನಾವು ಕೊಲೆ ಮಾಡಿದ್ದೇವೆ ಅರೆಸ್ಟ್ ಮಾಡಿ ಎಂದು ಹೇಳಿದರೂ ಪೊಲೀಸ್ ನಂಬುವ ಸ್ಥಿತಿಯಲ್ಲಿರಲಿಲ್ಲ. ಯಾವಾಗ ಹೆಣ ಬಿದ್ದ ಜಾಗಕ್ಕೆ ಯುವಕರನ್ನ ಕರೆದುಕೊಂಡು ಹೋಗುತ್ತಾರೋ ಆಗಲೇ ಗೊತ್ತಾಗಿದ್ದು ಕಾಲೇಜು ಹುಡುಗರ ಅಪರಾಧಿ ಪ್ರಕರಣಗಳು. ಹೀಗೆ ಯಾರಿಗೂ ಅರಿವಿಗೆ ಬಾರದಂತೆ ನಗರದಲ್ಲಿ ಕೊಲೆಯೊಂದು ನಡೆದು ಹೋಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button