ಬಿಜೆಪಿ ಹೆಣದ ಮೇಲೆ ರಾಜಕಾರಣ ಮಾಡುವ ಪಕ್ಷ-ರಮಾನಾಥ್ ರೈ ವಾಗ್ದಾಳಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ನಮ್ಮಲ್ಲಿ ಅನೇಖ ಧರ್ಮಾಧಾರಿತ ಹತ್ಯೆಗಳಾದವು, ಬಿಜೆಪಿ ಅಧೀನ ಸಂಘಟನೆ ಮತ್ತು ಪಿಎಫ್ ಐ ಸಂಘಟನೆಗಳು ಈ ಹತ್ಯೆಗಳಿಗೆ ಕಾರಣವಾಗಿದೆ. ಆದರೆ ಕಾಂಗ್ರೆಸ್ ನ ಒಬ್ಬ ಕಾರ್ಯಕರ್ತನು ಈ ಹತ್ಯೆಗಳಲ್ಲಿ ಕಾರಣವಾಗಿಲ್ಲ ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದರು.
ಅವರು ಇಂದು ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ತಮ್ಮನ್ನ ಭೇಟಿಯಾದ ಪತ್ರಕರ್ತರನ್ನ ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ನಲ್ಲಿ ಎಲ್ಲಾ ಜಾತಿ ಧರ್ಮೀಯರಿದ್ದಾರೆ. ಪೊಲೀಸ್ ಎಫ್ ಐ ಆರ್ ಲ್ಲಿ ಒಬ್ಬೇ ಇಬ್ಬ ಕಾಂಗ್ರೆಸ್ ನಾಯಕನ ಹೆಸರಿಲ್ಲ. ಬಿಜೆಪಿ ಹಾಗೂ ಎಸ್ ಡಿ ಪಿ ಐ ಕಾರ್ಯಕರ್ತರ ವಿರುದ್ಧ ಕೊಲೆ ಆರೋಪವಿದೆ. ಬಿಜೆಪಿ ಪ್ರೇರಿತ ಸಂಘಟನೆ ಕೃತ್ಯಗಳು ಮಾಹಿತಿ ಹಕ್ಕಿನಡಿ ಸಿಗುತ್ತೆದೆ ಎಂದು ಗುಡುಗಿದ್ದಾರೆ.
ಮಂಗಳೂರು ಜಿಲ್ಲೆಯಲ್ಲಿ ವಾರದೊಳಗೆ ಮೂರು ಹತ್ಯೆಗಳಾಯಿತು. ಇದು ಇಂಟೆಲಿಜೆನ್ಸ್ ವೈಫಲ್ಯವಾಗಿದೆ. ಹಾಗಾಗಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.ಸಿಎಂ ಬಸವರಾಜ್ ತಾರತಮ್ಯ ಮಾಡಿ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾರೆ. ಹಿಂದುಳಿದ ವರ್ಗದ ಮಕ್ಕಳು ಸಾಯ್ತಾರೆ, ಜೈಲಿಗೆ ಹೋಗ್ತಾರೆ. ಆದರೆ ಪ್ರಚೋದನಕಾರಿ ಭಾಷಣ ಮಾಡುವವರೆ ಬೇರೆ. ಪ್ರಚೋದನಾಕಾರಿ ಭಾಷಣ ಮಾಡುವವರನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.
ಟಿಪ್ಪು ಸುಲ್ತಾನ್ ಜಯಂತಿ ಸಮಯ ಯಾರಾದರೂ ಒಬ್ಬ ಸಾಯಲೇಬೇಕು ಎಂಬ ಸ್ಥಿತಿ ನಿರ್ಮಾಣವಾಗಿತ್ತು.ದಾರಿಯಲ್ಲೇ ಹರೀಶ್ ಪೂಜಾರಿ ಹತ್ಯೆ ಮಾಡಲಾಯ್ತು. ಬಿಜೆಪಿ ಈ ಘಟನೆ ಬಗ್ಗೆ ಭರ್ಜರಿ ಪ್ರಚಾರ ಮಾಡಿತು. ಈ ಕೊಲೆಯನ್ನ ಕೋಮುಗಲಭೆ ಎಂದು ಹೇಳಿ ಅದನ್ನ ಕಾಂಗ್ರೆಸ್ ತಲೆಗೆ ಕಟ್ಟಲಾಯಿತು. ತನಿಖೆ ನಂತರ ಬಿಜೆಪಿ ಹುಡುಗರೇ ಮಾಡಿದ್ದು ಎಂದು ಖಾತ್ರಿಯಾಯಿತು.
ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಹಿಂದೂಗಳನ್ನ ಹತ್ಯೆ ಮಾಡಿದ್ದರು. ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಾ ಬಂದಿದೆ, ಕೊಲೆ ಸುಲಿಗೆಯ ನಂತರ ಜನ ಮಂಗಳೂರಿನವರಿಗೆ ಗೌರವ ಕೊಡ್ತಾ ಇಲ್ಲ, ಕಾಂಗ್ರೆಸ್ ಸಾಮರಸ್ಯ ಸಮಾವೇಶ, ನಡಿಗೆ ಮಾಡಿದರೂ ಉಪಯೋಗವಾಗಿಲ್ಲ. ಪ್ರಚೋದನೆ ನಿಲ್ಲಿಸದ ಹೊರತು ದ.ಕ ಜಿಲ್ಲೆಯಲ್ಲಿ ಶಾಂತಿ ನೆಲೆಸೊಲ್ಲವೆಂದು ಗುಡುಗಿದರು.
ಹತ್ಯೆ ಸೂತ್ರಧಾರರನ್ನ ಮೊದಲು ಬಂಧಿಸಬೇಕು. ಎರಡೂ ಕಡೆಯ ಸೂತ್ರಧಾರಿಗಳನ್ನ ಮತ್ತು ಪ್ರಚೋದನಾಕಾರಿಗಳನ್ನ ಬಂಧಿಸಬೇಕೆಂದು ರಮಾನಾಥ ರೈ ಆಗ್ರಹಿಸಿದರು.

