ಸ್ಥಳೀಯ ಸುದ್ದಿಗಳು
ಆ.6 ರಂದು ತುರ್ತು ಕಾಮಗಾರಿ ಹಿನ್ನಲೆ ನಗರದಲ್ಲಿ ವಿದ್ಯುತ್ ವ್ಯತ್ಯಯ

ಸುದ್ದಿಲೈವ್. ಕಾಂ/ಶಿವಮೊಗ್ಗ
ಆಗಸ್ಟ್ 6 ರಂದು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಲ್ಕೋಳ ವಿ.ವಿ.ಕೇಂದ್ರದಿಂದ ಬರುವ ಎ.ಎಫ್-1, 2 ಮತ್ತು 3 ಫೀಡರ್ಗಳಲ್ಲಿ ಮಾರ್ಗಮುಕ್ತತೆ ನೀಡಬೇಕಾಗಿದ್ದು ಕೆಳಕಂಡ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಶ್ರೀರಾಮ್ಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಸ್ಟೇಡಿಯಮ್, ಹಾಲದೇವರ ಹೊಸೂರು, ಗುಡ್ಡದ ಹರಕೆರೆ, ಶಕ್ತಿಧಾಮ, ಪೊಲೀಸ್ ಲೇಔಟ್, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಭೋವಿ ಕಾಲೋನಿ, ತ್ಯಾವರೆಕೊಪ್ಪ ಸಿಂಹಧಾಮ, ವೀರಗಾರನಭೈರನಕೊಪ್ಪ, ಆಲ್ಕೋಳ ಸರ್ಕಲ್,
ಎಬಿವಿಪಿ ಲೇಔಟ್, ಎಸ್.ವಿ.ಬಡಾವಣೆ, ಹರ್ಷ ಫರ್ನ್ ಹೋಟೆಲ್, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

