ಆ.6 ರಂದು ರಾಷ್ಟ್ರಧ್ವಜ ಹಿಡಿದು ಹೊರಡಲಿದೆ ಕಾಂಗ್ರೆಸ್

ಸುದ್ದಿಲೈವ್.ಕಾಂ/ಶಿವಮೊಗ್ಗ
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಸಂದರ್ಭದಲ್ಲಿ ಅಮೃತ ವರ್ಷದ ಸವಿನೆನಪಿಗಾಗಿ ಕಾಂಗ್ರೆಸ್ ನಗರದಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ನಗರದ ಗಲ್ಲಿ ಗಲ್ಲಿಗಳಲ್ಲಿ ಸಾಗುತ್ತಿದೆ ಕಾಂಗ್ರೆಸ್ ಜಿಲ್ಲಾ ಘಟಕ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗ ಬಲಿದಾನವನ್ನು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದ ಘಟನೆಗಳನ್ನು ನೆನಪು ಮಾಡಿಕೊಳ್ಳಲು ರಾಷ್ಟ್ರಧ್ವಜವನ್ನು ಹಿಡಿದು ಸ್ವಾತಂತ್ರ್ಯ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಆ.6 ರಂದು ಮೂಹೂರ್ತ ಫಿಕ್ಸ್ ಮಾಡಿಕೊಂಡಿದೆ.
ಆ.6 ರಂದು ಶನಿವಾರ ಬೆಳಿಗ್ಗೆ 08.30 ಗಂಟೆಗೆ ಒಂದನೇ ಹಂತದ ಸ್ವಾತಂತ್ರ್ಯ ನಡಿಗೆಯು ಶಿವಮೊಗ್ಗ ನಗರದ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್ನ ವಿನಾಯಕ ಸ್ವಾಮಿ ದೇವಸ್ಥಾನದಿಂದ ಉದ್ಘಾಟನೆಯ ಮೂಲಕ ಪ್ರಾರಂಭವಾಗಲಿದೆ.
ಗಾಂಧಿಬಜಾರ್, ಶಿವಪ್ಪನಾಯಕ ಪ್ರತಿಮೆ, ಎ.ಎ. ಸರ್ಕಲ್, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಜೈಲ್ ಸರ್ಕಲ್ ಮುಖಾಂತರ ಸಂಗೊಳ್ಳಿ ರಾಯಣ್ಣ ರಸ್ತೆಯಿಂದ ಲಕ್ಷ್ಮಿ ಟಾಕೀಸ್ ಎದರುಗಡೆಯ ಚಾನಲ್ ರಸ್ತೆಯಲ್ಲಿ ಮುನ್ನಡೆದು ಶರಾವತಿ ನಗರದ ಡಬ್ಬಲ್ ರಸ್ತೆಯಲ್ಲಿ ಸಾಗಿ 60ಅಡಿ ರಸ್ತೆಯಿಂದ ಎ.ಪಿ.ಎಂ.ಸಿ. ಗೇಟ್ನಿಂದ ತಿರುಗಿ ವಿನೋಬನಗರದ 100ಅಡಿ ರಸ್ತೆ ಮುಖಾಂತರ ಸಂಚರಿಸಿ ಪೊಲೀಸ್ ಚೌಕಿಯಿಂದ ಡಿ.ವಿ.ಎಸ್. ಮುಂಭಾಗದ 100ಅಡಿ ರಸ್ತೆಯಿಂದ ಫ್ರೀಡಂ ಪಾರ್ಕ್ನ್ನು ತಲುಪಲಿದೆ.
ಎರಡನೇ ಹಂತ :
ದಿನಾಂಕ 06-08-2022ನೇ ಶನಿವಾರ ಮಧ್ಯಾಹ್ನ 03.30 ಗಂಟೆಗೆ ಎರಡನೇ ಹಂತದ ಸ್ವಾತಂತ್ರ್ಯ ನಡಿಗೆಯು ಉದ್ಘಾಟನೆಯೊಂದಿಗೆ ಫ್ರೀಡಂ ಪಾರ್ಕ್ನಿಂದ ಹೊರಟು ಲಕ್ಷ್ಮಿ ಟಾಕೀಸ್ ಪಕ್ಕದ 100ಅಡಿ ರಸ್ತೆಯಲ್ಲಿ ಮುನ್ನೆಡೆದು ಉಷಾ ನರ್ಸಿಂಗ್ ಹೋಂ ವರೆಗೆ ಸಾಗಿ ನಂತರ ಸವಳಂಗ ರಸ್ತೆಗೆ ತಿರುಗಿ ಈ ಮೂಲಕ ಶಿವಮೂರ್ತಿ ಸರ್ಕಲ್ ಮಹಾವೀರ ಸರ್ಕಲ್ (ಕೋರ್ಟ್ ಸರ್ಕಲ್)ನಿಂದ ಡಿ.ವಿ.ಎಸ್. ಶಾಲೆಯ ಕಾನ್ವೆಂಟ್ ರಸ್ತೆಯಿಂದ ಬಿ.ಹೆಚ್. ರಸ್ತೆ ತಲುಪುವುದು.
ನಂತರ ಸರ್ಕಾರಿ ಪ್ರೌಢ ಶಾಲೆ ಮುಂಭಾಗದಲ್ಲಿ ಮುನ್ನಡೆದು ಶಂಕರಮಠ ಸರ್ಕಲ್ನಿಂದ ಬೆಕ್ಕಿನಕಲ್ಮಠದ ವರೆಗೆ ನಂತರ ಕೋಟೆ ರಸ್ತೆಯ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕೋಟೆ ಮಾರಿಕಾಂಬ ದೇವಸ್ಥಾನವನ್ನು ತಲುಪಿ ದೇವಸ್ಥಾನದ ಆವರಣದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಡಿಗೆಯ ಮುಕ್ತಾಯ ಸಮಾರಂಭ ನಡೆಯಲಿದೆ.

