ಸ್ಥಳೀಯ ಸುದ್ದಿಗಳು

ಅರಣ್ಯ ಇಲಾಖೆ ವಿರುದ್ದ ಬೃಹತ್ ಪ್ರತಿಭಟನೆಗೆ ಸಜ್ಜಾದ ಮಲೆನಾಡಿನ ರೈತರು ಬಿಳಿಗಾರಿನಿಂದ ಕಾರ್ಗಲ್ ವರೆಗೆ ಬೃಹತ್ ಪಾದಯಾತ್ರೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಸಾಗರ ತಾಲೂಕಿನ‌ ಉರುಳುಗಲ್ಲಿನ ಮರ ಕಡಿತಲೆ ಪ್ರಕರಣ ತೀವ್ರ ಸ್ವರೂಪಪಡೆದುಕೊಂಡಿದ್ದು ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಮಲೆನಾಡಿನಲ್ಲಿ ತೀವ್ರ ರೈತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಅರಣ್ಯ ಇಲಾಖೆ ವಿರುದ್ದ ಜನಪರ ವೇದಿಕೆ ಆಯೋಜಿಸಿರುವ ಪ್ರತಿಭಟನೆಗೆ ನಾಡಿನ ಸಾಹಿತಿಗಳು, ಹೋರಾಟಗಾರರು ತೀವ್ರ ಬೆಂಬಲ ವ್ಯಕ್ತಪಡಿಸಿ, ಬೃಹತ್ ಪಾದಯಾತ್ರೆಗೆ ಸಜ್ಜಾಗಿದ್ದಾರೆ.

ಉರುಳುಗಲ್ಲಿನ ಕೆಲ ಗ್ರಾಮಸ್ಥರು, ಅಕ್ರಮ ಮರ ಕಡಿತಲೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಲೇಟು ಹಿಡಿಸಿ ಜು.21 ರಂದು ದೂರು ದಾಖಲಿಸಿಕೊಂಡಿದ್ದರು. ಅರಣ್ಯ ಇಲಾಖೆಯ ಕ್ರಮಕ್ಕೆ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಈ ಘಟನೆ ಸ್ಥಳೀಯ‌ ಶಾಸಕ ಹರತಾಳು ಹಾಲಪ್ಪರಿಗೆ ಇರಿಸು ಮುರಿಸು ಉಂಟಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆ ಹಾಗೂ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಈ ವಿಷಯ ಪ್ರತಿಧ್ವನಿಸಿತ್ತು. ಈ ಹಿನ್ನಲೆಯಲ್ಲಿ ಸರ್ಕಾರ ಅಧಿಕಾರಿಯನ್ನು‌ ಅಮಾನತ್ತಿನಲ್ಲಿಡದೆ ಕಾರ್ಗಲ್ ವನ್ಯಜೀವಿ ವಿಭಾಗ ವ್ಯಾಪ್ತಿಯ ಕಾನೂರು ಶಾಖೆಯಿಂದ ಶಿವಮೊಗ್ಗ ವನ್ಯ ಜೀವಿ ವಿಭಾಗದ ಐಸಿಟಿ ಮೋಜಣಿ ಕೆಲಸಕ್ಕೆ ನಿಯೋಜನೆ ಮಾಡುವ ಮೂಲಕ ರೈತರ ಆಕ್ರೋಶ ತಣಿಸುವ ಕೆಲಸ ಮಾಡಿದೆ.

ಆದರೆ ಸರ್ಕಾರದ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ಮ ಹೋರಾಟ ಒಬ್ಬ ಅಧಿಕಾರಿ ವಿರುದ್ದ ಅಲ್ಲ,ಈಡೀ ಅರಣ್ಯ ಇಲಾಖೆ ಕಿರುಕುಳ ವಿರುದ್ದ ನಮ್ಮ ಹೋರಾಟ.ನಾಡಿಗೆ ಬೆಳಕು ಕೊಟ್ಟ ಶರಾವತಿ ಮುಳುಗಡೆ ಸಂತ್ರಸ್ಥರು ಹೆಚ್ಚಾಗಿ ಉರುಳುಗಲ್ಲು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.ಕನಿಷ್ಟ ರಸ್ತೆ,ವಿದ್ಯುತ್ ಸೌಲಭ್ಯ ಇಲ್ಲ.ಈ ಎಲ್ಲಾ ಸೌಲಭ್ಯಕ್ಕೆ ಅಡ್ಡಿಯಾಗುತ್ತಿರುವ ಅರಣ್ಯ ಇಲಾಖೆ ವಿರುದ್ದ ನಮ್ಮ ಹೋರಾಟವಾಗಿದೆ ಎಂದು ತುಮರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು,ಹೋರಾಟದ ನೇತೃತ್ವ ವಹಿಸಿರುವ ಜಿ.ಟಿ ಸತ್ಯನಾರಾಯಣ ಸುದ್ದಿಲೈವ್. ಕಾಂ ಗೆ ತಿಳಿಸಿದ್ದಾರೆ.

ಆ.5 ರಂದು ಬಿಳಿಗಾರಿನಿಂದ ಕಾರ್ಗಲ್ ವರೆಗೆ ಸಾವಿರಾರು ರೈತರು,ವಿವಿಧ ರಾಜಕೀಯ ಪಕ್ಷದ ನಾಯಕರು,ರೈತ ಸಂಘಟನೆಗಳ ನಾಯಕರು, ಕಾರ್ಯಕರ್ತರು ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಅಲ್ಲದೇ ಸಾಹಿತಿ ನಾ.ಡಿಸೋಜ ಅವರು ಸಹ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.ಒಟ್ಟಿನಲ್ಲಿ ಅರಣ್ಯ ಇಲಾಖೆ ವಿರುದ್ದ ನಾಳೆ ನಡೆಯುವ ಬೃಹತ್ ಪಾದಯಾತ್ರೆ ಯಾವ ಸ್ವರೂಪ ಪಡೆದುಕೊಳ್ಳಲಿದೆ.ಕಾದು ನೋಡಬೇಕಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button