ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ತಾಯಿಯಾಗುವುದೆಂದರೆ ನಾಟಕ ಪ್ರದರ್ಶನ

ಸುದ್ದಿಲೈವ್.ಕಾಂ/ಶಿವಮೊಗ್ಗ
ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮುಂದಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ನಾಟಕ ಆಡಿಸುವ ಮೂಲಕ ಬಂದ ಹಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಜೆಸಿಐ ನ ಮಂಜುನಾಥ್ ಕದಮ್ ಬಿ.ಬೀರನ ಕೆರೆಯ ಸರ್ಕಾರಿ ಶಾಲೆಯನ್ನ 30 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಸಹಾಯದಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ 8 ಲಕ್ಷದ ವೆಚ್ಚದಲ್ಲಿ ಅಲ್ಪ ಪ್ರಮಾಣದ ಅಭಿವೃದ್ದಿ ಪಡಿಸಲಾಗಿದೆ ಎಂದರು.
ನಾಟಕದ ರಘುನಂದನ್ ಮಾತನಾಡಿ ನಾಟಕದ ಹುಟ್ಟು ಹೇಗೆ ಆಗಿದೆ ಎಂದರೆ, ಜೀವನ ಸತ್ಯ ಕಥೆಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ನಮ್ಮದೇ ಜೀವನಕಥೆಯನ್ನ ಆಧಾರಿಸಿ ಏಕಪಾತ್ರ ಅಭಿನಯದ ನಾಟಕ ರೂಪಿಸಿದ್ದೇವೆ.
ನಾನು ಹಾಗೂ ಪತ್ನಿ ಮದುವೆಯಾಗಿ ಐದು ಮಕ್ಕಳಿಗಾಗಿ ಪರಿತಪಿಸಿದೆವು. 5 ಬಾರಿ ಮಿಸ್ ಕ್ಯಾರಿಯೇಜ್ ಆಗಿದೆ. ದತ್ತು ತೆಗೆದುಕೊಂಡು ಸಂತೋಷವಾಗುತ್ತದೆ. ಇದನ್ನ ರಂಗಭೂಮಿಯಲ್ಲಿ ಹೆಸರಾಂತ ಕೃಷ್ಣಮೂರ್ತಿ ಅವರ ಬಳಿ ಹೇಳಿಕೆಂಡಾಗ ಇದನ್ನೇ ಕಥಾವಸ್ತುಗಳನ್ನಾಗಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
1 ಗಂಟೆ 10 ನಿ. ಏಕವ್ಯಕ್ತಿ ಅಭಿನಯದ ತಾಯಿಯಾಗುವುದೆಂದರೆ ನಾಟಕವನ್ನ ಹಾಸನದಲ್ಲಿ ಶುಲ್ಕವಿಲ್ಲದೆ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.. ಶಿವಮೊಗ್ಗದಲ್ಲೂ ಆ. 7 ರಂದು ಸುವರ್ಣ ಸಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಜಯ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

