ಸಿಟಿ ಕೋ ಆಪರೇಟಿವ್ ಬ್ಯಾಂಕ್-ಸದೃಢ ಹಾಗೂ ವಿಶ್ವಾಸದ ಬ್ಯಾಂಕ್-ಮರಿಯಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ಕೋಟೆ ಸಿಟಿ ಕೋಆಪರೇಟಿವ್ ಬ್ಯಾಂಕ್ ನ 110 ನೇ ವರ್ಷದ ವಾರ್ಷಿಕೋತ್ಸವ ನಡೆಯುತ್ತಿದೆ. ಎಸ್ ತಿಮ್ಮಪ್ಪ, ಕೃಷ್ಣ ಸಿಂಗ್, ಮಹೇಶಪ್ಪ,ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದಂತಹ ಬ್ಯಾಂಕು ಸಧೃಢವಾಗಿದೆ ಎಂದು ಬ್ಯಾಂಕ್ ನ ನಿರ್ದೇಶಕ ಮರಿಯಪ್ಪ ತಿಳಿಸಿದರು.
ಅವರು ಮೀಡಿಯಾ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಟಿ ಕೋಆಪರೇಟಿವ್ ಎಂದರೆ ಮೊದಲು ಸೀಗೆಹಟ್ಟಿ, ಹೊಸಮನೆ, ಅಂಗಳಯ್ಯನ ಕೆರೆ ಹಾಗೂ ದುರ್ಗಿಗುಡಿ ಬಡಾವಣೆಗೆ ಸೀಮಿತಗೊಂಡು ಆರಂಭಗೊಂಡ ಬ್ಯಾಂಕ್ ಇಂದು ವಿಸ್ತಾರವಾಗಿ ಬೆಳೆದು ಸಧೃಢವಾಗಿ ಬೆಳೆದಿದೆ. ಆಗ ಮಾರಿ ಹಬ್ಬಕ್ಕೆ ಸಣ್ಣಪುಟ್ಟ ಹಣ ನೀಡಲಾಗುತ್ತಿತ್ತು. ಇಂದು ವಿಸ್ತಾರವಾಗಿ ಬ್ಯಾಂಕ್ ಬೆಳೆದಿದೆ ಎಂದರು.
ಈಗ ಸಿಟಿ ಕೋಆಪರೇಟಿವ್ ಬ್ಯಾಂಕ್ ಗೆ ಎಲ್ ಎಲ್ ಆರ್ ನಗರದಲ್ಲಿ ಶಾಖೆ ಹೊಂದುತ್ತಿದ್ದೇವೆ. ರಿಸರ್ವ್ ಬ್ಯಾಂಕ್ ಅಂಡರ್ ತೆರೆಯುತ್ತಿದ್ದೇವೆ., 7000 ಜನ ಸದಸ್ಯರಿದ್ದರಾರೆ. 25 ನೇ ವರ್ಷಿಕೋತ್ಸವ, 50 ವರ್ಷದ ವಾರ್ಷಿಕೋತ್ಸವ, 75 ನೇ ವರ್ಷಿಕೋತ್ಸವ ಹಾಗೂ 100ನೇ ವರ್ಷದ ವಾರ್ಷಿಕೋತ್ಸವ ನಡೆಸಿದ್ದೇವೆ.
ಆರ್ ಬಿ ಐ ನ ಗೈಡ್ ಲೈನ್ಸ್ ನ ಹಿನ್ಬಲೆಯಲ್ಲಿ ಈಗ ಸಾಲಕೊಡಲಾಗುತ್ತಿಲ್ಲ. ಜೆಪಿ ಸೆಕ್ಯೂರಿಟಿ ಮಾಡಿಕೊಳ್ಳಲಾಗುತ್ತಿದೆ. ನಿರ್ದೇಶಕರ ಕೈವಾಡ ಇಲ್ಲಿ ಇಲ್ಲ. ರಿಸರ್ವ್ ಬ್ಯಾಂಕ್ ನಿರ್ದೇಶನದ ಹಿನ್ನಲೆಯಲ್ಲಿ ಸಾಲ ನೀಡಲಾಗುತ್ತಿಲ್ಲ. ಷೇರು ಬಂಡವಾಳ 3 ಕೋಟಿ 45 ಲಕ್ಷ ರೂ., 85 ಕೋಟಿ 32 ಲಕ್ಷ ಠೇವಣಿ, 105 ಕೋಟಿ 7 ಲಕ್ಷ ರೂ., ದುಡಿಯುವ ಬಂಡವಾಳವನ್ನ ಹೊಂದಿದ್ದೇವೆ.
32 ಕೋಟಿ 48 ಹೂಡಿಕೆಗಳು, ನಿಧಿಗಳು, 85.35 ಲಕ್ಷ ರೂ., ನಿವ್ವಳ ಲಾಭ, ಒಟ್ಟು 8338 ‘ಎ’ ಸದಸ್ಯರಿದ್ದಾರೆ, 16 ಒಟ್ಟು ಪಿಗ್ಮಿ ಏಜೆಂಟರಿದ್ದಾರೆ. 6.95% ಎನ್ ಪಿ ಎ ಪ್ರಮಾಣವಿದೆ. 9.50% ರಿಂದ 10.50% ಸಾಲದ ಮೊತ್ತಕ್ಕೆ ಅನುಗುಣವಾಗಿ, ಸಾಲದ ಬಡ್ಡಿದರ ವರ್ಷಕ್ಕೆ ಶೇ.7(ಹಿರಿಯ ನಾಗರೀಕರಿಗೆ ಶೇ.0.50% ಹೆಚ್ಚುವರಿ ಠೇವಣಿ ಬಡ್ಡಿದರ. ನೆಫ್ಟ್, ಆರ್ ಟಿ ಜಿ ಎಸ್, ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವಗಳಿವೆ. ಇದರೊಙದಿಗೆ ಬ್ಯಾಂಕ್ ಸಧೃಡವಾಗಿದೆ ಎಂದರು.
ಸಿನಿಯರ್ ಸಿಟಿಜನ್ ರಿಗೆ ಠೇವಣಿ ಪಡೆದು ಶೇ. 7.5% ಬಡ್ಡಿದರ ನೀಡಲಾಗುತ್ತಿದೆ. 110 ನೇ ವರ್ಷ ಅಂಗವಾಗಿ ಡಿಸೆಂಬರ್ ವರೆಗೆ ನೀಡಲಾಗುತ್ತದೆ ಎಂದರು.
ಕೋಟೆ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಉಮಾಶಂಕರ್ ಉಪಾಧ್ಯ ರಾಜಣ್ಣ, ರೇಖಾ, ರಾಕೇಶ, ಶೇಷಾದ್ರಿ, ಕೆ.ರಂಗನಾಥ್ ಉಪಸ್ಥಿತರಿದ್ದರು.

