ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ರಿಲಿಯನ್ಸ್ ಡಿಜಿಟಲ್ ಶಾಪ್ ನಲ್ಲಿ ಕಳ್ಳತನ

ಸುದ್ದಿಲೈವ್.ಕಾಂ/ಶಿವಮೊಗ್ಗ
ಗ್ರಾಹಕನಂತೆ ಬಂದು ನಗರದ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ನಲ್ಲಿರುವ ರಿಲಿಯನ್ಸ್ ಡಿಜಿಟಲ್ ಶೋ ರೂಮ್ ನಲ್ಲಿರುವ 1,40,000/- ರೂ. ಮೌಲ್ಯದ ಎರಡು ಮೊಬೈಲ್ ಗಳನ್ನ ಕಳವು ಮಾಡಿರುವ ಘಟನೆ ನಡೆದಿದೆ.
ಕೆ.ಎಸ್.ಆರ್.ಟಿ.ಸಿ ಪ್ರಮುಖದ್ವಾರದಲ್ಲಿ ಪ್ರವೇಶಿಸಿದರೆ ಎಡಕ್ಕೆ ಸಿಗುವ ದೊಡ್ಡ ರಿಲಿಯನ್ಸ್ ಡಿಜಿಟಲ್ ಶೋ ರೂಂ ನಲ್ಲಿ ಮೊನ್ನೆ ಸಂಜೆ 4-30 ರ ಸಮಯದಲ್ಲಿ ಗ್ರಾಹಕನಂತೆ ಬಂದ ವ್ಯಕ್ತಿ ಆಪಲ್ -೧೨ ಮಾಡೆಲ್ ನ ಎರಡು ಮೊಬೈಲ್ ನ್ನ ಕದ್ದುಕೊಂಡು ಹೋಗಿದ್ದಾನೆ.
ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದ ಅಂಗಡಿಯ ಸಿಬ್ಬಂದಿಗೆ ಎರಡು ಮೊಬೈಲ್ ಕಳೆದಿರುವುದು ಬೆಳಕಿಗೆ ಬಂದಿದೆ. ನಂತರ ಸ್ಟಾಕ್ ಚೆಕ್ ಮಾಡಿದಾಗ ಈ ಮೊಬೈಲ್ ಕಳೆದಿರುವುದು ಗೊತ್ತಾಗಿದೆ. ತಕ್ಷಣವೇ ಅಂಗಡಿಯ ಸಿಸಿ ಟಿವಿ ಪರಿಶೀಲಿಸಲಾಗಿದೆ.
ಮೊನ್ನೆ ಸಂಜೆ ಗ್ರಾಹಕನಾಗಿ ಬಂದ ವ್ಯಕ್ತಿ ಒಂದುಕಪ್ಪು ಬಣ್ಣದ ಆಪಲ್ ಐ ಫೋನ್-12 ಮತ್ತು ಪರ್ಪಲ್ ಕಲರ್ ನ ಐಫೋನ್ 12 ಮೊಬೆಲ್ ಕಳುವಾಗಿದೆ. ಇವೆರಡರ ಬೆಲೆ ಒಟ್ಟು 1,40,000/- ರೂ ಎಂದು ಅಂದಾಜಿಸಲಾಗಿದೆ. ಅಂಗಡಿಯ ಸಿಬ್ಬಂದಿ ಚರಣ್ ಕಾಸ್ಕಾಡಾ ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

