ಕ್ರೈಂ
ನಿನ್ನ ಸೀಮಂತಕ್ಕೆ ಬರೊಲ್ಲವೆಂದು ಪತಿ ದಿಡೀರ್ ನಾಪತ್ತೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಪತ್ನಿಗೆ ಸೀಮಂತಕ್ಕೆ ಬರೊಲ್ಲವೆಂದು ಹೇಳಿ ಪತಿ ಧಿಡೀರನೇ ನಾಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಆರ್ ಎಂ ಎಲ್ ನಗರದ ಎರಡನೇ ತಿರುವಿನ ನಿವಾಸಿ ಸಯ್ಯದ್ ಜಖಾವುಲ್ಲಾರಿಗೆ ಜೆಪಿಎನ್ ರಸ್ತೆಯಲ್ಲಿರುವ ಪತ್ನಿ ಕರೆ ಮಾಡಿದ್ದಾರೆ. ತವರು ಮನೆಗೆ ತೆರಳಿದ್ದ ಪತ್ನಿ ಪತಿಗೆ ಸೀಮಂತ ಕಾರ್ಯಕ್ರಮಕ್ಕೆ ಬರುವಂತೆ ಮೊಬೈಲ್ ಕರೆ ಮಾಡಿದ್ದಾರೆ.
ಪತ್ನಿಯ ಫೊನ್ ರಿಸೀವ್ ಮಾಡಿದ ಪತಿ ಜಖಾವುಲ್ಲಾ ನಾನು ನಿನ್ನ ಸೀಮಂತ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹೇಳಿ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದು ಪತ್ನಿಯ ಕುಟುಂಬಕ್ಕೆ ಗಾಬರಿ ಹುಟ್ಟಿಸಿದೆ.
ಕಾರ್ಪೆಂಟರ್ ಕೆಲಸ ಮಾಡಿಕೊಂಡಿರುವ ಜಖಾವುಲ್ಲಾರ ಈ ನಡೆ ಪತ್ನಿಯ ಕುಟುಂಬಕ್ಕೆ ಆಘಾತವುಂಟು ಮಾಡಿದೆ. ಈ ಹಿನ್ನಲೆಯಲ್ಲಿ ಬೀಬೀ ಖತೀಜಾ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

