ಅಣ್ಣ ತಮ್ಮಂದಿರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಬಡಿದಾಟ ಬಂದೂಕಿನಿಂದ ಗುಂಡು ಹಾರಿಸಿದ ಅಣ್ಣ

ಸುದ್ದಿಲೈವ್.ಕಾಂ/ಶಿವಮೊಗ್ಗ
ಕ್ಷುಲ್ಲಕ ಕಾರಣಕ್ಕೆ ಅಣ್ಣ ತಮಂದಿರ ನಡುವೆ ಗಲಾಟೆಯಾಗಿದ್ದು ಕೊನೆಯ ತಮ್ಮನಿಗೆ ಅಣ್ಣನೇ ನಾಡ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಭದ್ರಾವತಿ ತಾಲೂಕು ಸಿದ್ದರಮಟ್ಟಿ ಬ್ಲಾಕ್ ಗ್ರಾಮದಲ್ಲಿ ಆರ್ಮುಗಂ ಎಂಬುವರಿಗೆ ಸೇರಿದ 2 ಎಕರೆ ಜಮೀನು ಹೊಂದಿದ್ದು ಒಂದು ವರ್ಷದ ಹಿಂದೆ ಆರ್ಮುಗಂ ನಿಧನರಾಗಿದ್ದರು. ಆರ್ಮುಗಂ ಸಾವನ್ಬಪ್ಪಿದ ನಂತರ ಇವರ ಮಕ್ಕಳಾದ 7 ಜನರ ನೆಡುವೆ ಜಮೀನು ಅರ್ಧ ಗುಂಟೆ, 20 ಗುಂಟೆ ಹೀಗೆ ಭಾಗವಾಗಿತ್ತು.
ಆದರೆ ಜಮೀನಿನ ವಿಚಾರದಲ್ಲಿ ದೊಡ್ಡ ಅಣ್ಣ ಮುನಿಸ್ವಾಮಿ ಸಣ್ಣ ತಮ್ಮ ಮುರುಗೇಶ್ ಮತ್ತು ಅವರ ಪತ್ನಿ, ಮಾವ ನಾಗರಾಜ್ ಮಗಳು ಸುಜಾತರನ್ನ ಬಾಯಿಗೆ ಬಂದಂತೆ ಬೈದು ನಮ್ಮ ತೋಟಕ್ಕೆ ಹೋಗಲು ಅಡ್ಡಪಡಿಸಲು ಹೂವಿನ ಗಿಡ ಹಾಕುತ್ತೀರಾ ಎಂದು ಬೈಯಲು ಶುರು ಮಾಡಿದ್ದಾರೆ.
ಇದನ್ನ ಕೇಳಿಸಿಕೊಂಡು ಹೊರಗೆ ಬಂದ ಕೊನೆಯ ತಮ್ಮ ಮುರುಗೇಶ್ ಯಾಕೆ ಹೆಂಗಸರಿಗೆ ಬೈಯ್ಯುತ್ತೀಯ ಎಂದು ಕೇಳಿದ್ದಾರೆ. ಅಷ್ಟಕ್ಕೆ ಕೋಪದಿಂದ ಆತನನ್ನೂ ಬೈದು ಮನೆಯಲ್ಲಿದ್ದ ನಾಡ ಬಂದೂಕು ತಂದು ತೊಡೆಗೆ ಹಾರಿಸಿದ್ದಾನೆ.
ತೊಡೆಗೆ ಹಾರಿಸಿ ಮುರುಗೇಶಿ ತೀರ್ವವಾಗಿ ಗಾಯಗೊಂಡಿದ್ದಾರೆ. ಅವರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಎನ್ ಹೆಚ್ ಗೆ ದಾಖಲಿಸಲಾಗಿದೆ. ಆರೋಪಿ ಮುನಿಸ್ವಾಮಿ ತಪ್ಪಿಸಿಕೊಂಡಿದ್ದಾನೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಅಕ್ರಮಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ಕೊಲೆಗೆ ಯತ್ನ ಪ್ರಕರಣ ಮುನಿಸ್ವಾಮಿ ವಿರುದ್ಧ ದಾಖಲಾಗಿದೆ. ಸಧ್ಯಕ್ಕೆ ಮುರುಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

