ಸ್ಥಳೀಯ ಸುದ್ದಿಗಳು

ಸಹಕಾರ ಸಂಘಗಳ ನಿಯಮಗಳು ಉಲ್ಲಂಘನೆ ಮಾಡಿದ ಸಂಸ್ಥೆಗೆ ಆಡಳಿತಾಧಿಕಾರಿಗಳ ನೇಮಕ ಮಾಡುವಂತೆ ಎಂ ಅಬ್ದುಲ್ ಖಾದರ್ ಆಗ್ರಹ

ಸುದ್ದಿಲೈವ್. ಕಾಂ/ಶಿವಮೊಗ್ಗ

ಮಾನ್ಯತೆ ನವೀಕರಣ ಮಾಡದ ಸಂಘ -ಸಂಸ್ಥೆಗಳನ್ನು ರದ್ದು ಮಾಡಲು ಸಹಕಾರ ಸಂಘಗಳ ಉಪನಿಬಂಧಕರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾಗರದ ಮಸ್ಜಿದುಲ್ಅಮೀನ್ ಶಾಫಿ ಮುಸ್ಲಿಂ ಜಮಾತ್ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಎಂ. ಅಬ್ದುಲ್ ಖಾದರ್ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಗರದ ಮಸ್ಜಿದುಲ್ ಅಮೀನ್ ಶಾಫಿ ಮುಸ್ಲಿಂ ಜಮಾತ್ ಆಡಳಿತ ಕಮಿಟಿ ಎಂಬ ಸಂಘವು 2008-09 ರಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ
ನೋಂದಣಿಯಾಗಿದೆ.

ಆದರೆ ಅಲ್ಲಿಂದ ಇಲ್ಲಿಯ ವರೆಗೂ ಸಹಕಾರ ಸಂಘಗಳ ಇಲಾಖೆಗೆ ಆಡಳಿತ ಕಮಿಟಿ ಯಾವುದೇ ಲೆಕ್ಕ ಪತ್ರ ಸಲ್ಲಿಸಿರುದಿಲ್ಲ. ಅಲ್ಲದೇ ಸಂಘವು ನೋಂದಣಿಯ ನವೀಕರಣವನ್ನು ಮಾಡಿರುವುದಿಲ್ಲ. ಆದರೂ ಇಂತಹ ಸಂಘ- ಸಂಸ್ಥೆಗಳ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ಮಸ್ಜಿದುಲ್ ಅಮೀನ್ ಎಂಬ ಸಂಘವು ಸಹಕಾರ ಕಾಯ್ದೆಯ ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಆದರೂ ಸಾರ್ವಜನಿಕರಿಂದ ಹಾಗೂ ಸಂಘದ ಸದಸ್ಯರಿಂದ ನೊಂದಣಿ ಆಧಾರದ ಮೇಲೆ ಹಣ ಸಂಗ್ರಹಿಸಿ ಬೈಲಾ ನಿಯಮದಂತೆ ಸರಿಯಾದ ಲೆಕ್ಕಪತ್ರವನ್ನು ಸಂಘದ ಸದಸ್ಯರಿಗೆ ನೀಡುತ್ತಿಲ್ಲ.
ಮಸೀದಿಯ ಕಾಮಗಾರಿ, ಅಭಿವೃದ್ಧಿಯ ನೆಪದಲ್ಲಿ ದಾನಿಗಳಿಂದ ಸಂಗ್ರಹಿಸಿದ ಸಂಘದ ಹಣ ದುರುಪಯೋಗ ಆಗುತ್ತಿದೆ.

ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮಸೀದಿಯ (ಸಂಘದ) ಹಣ ಕೊಡೋ ತೆಗೊಳ್ಳುವ ವಹಿವಾಟಿನಿಂದಾಗಿ ಸುಮಾರು ಎರಡು ಲಕ್ಷ ಹಣ ಲೆಕ್ಕದಲ್ಲಿ ವೆತ್ಯಾಸ ಕಂಡುಬಂದಿದೆ ಎಷ್ಟೇ ಲೆಕ್ಕ ಮಾಡಿದರು ಎರಡು ಲಕ್ಷ ಹಣ ಲೆಕ್ಕದಲ್ಲಿ ಸಿಗುತ್ತಿಲ್ಲ ಎಂದು ಆಡಳಿತ ಮಂಡಳಿಯ ಲೆಕ್ಕ ಬರೆಯುವ ವ್ಯಕ್ತಿಗಳಿಂದ ತಿಳಿದುಬಂದಿದೆ

ಈ ಸಂಘವು ಸಹಕಾರ ಸಂಘಗಳ ಯಾವುದೇ ಕಾಯ್ದೆ
ಕಾನೂನು ನಿಯಮಗಳನ್ನು ಪಾಲನೆ ಮಾಡಿರುದಿಲ್ಲ.
ಈ ಬಗ್ಗೆ ನಾನು ಸಹಕಾರ ಸಂಘಗಳ ಉಪನಿಬಂಧಕರಿಗೆ
ದೂರು ನೀಡಿದರೂ ಕ್ರಮಕೈಗೊಳ್ಳಲಿಲ್ಲ. ಹಾಗೆಯೇ ನನ್ನ ದೂರು ಕುರಿತಂತೆ ಸಹಕಾರ ಸಂಘಗಳ ಜಂಟಿ ನಿರ್ದೇಶಕರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರ ಮೇರೆಗೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷರ ವಿಚಾರಣೆ ನೆಡಸಿ,ಹೇಳಿಕೆ ಪಡೆದ ಅವರ ಉತ್ತರ ಸಮರ್ಪಕವಾಗಿಲ್ಲ ಎಂದು ತಿಳಿದು ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಹಕಾರ ಸಂಘಗಳ ಉಪನಿ ಬಂಧಕರನ್ನು ಅನುಮಾನಿ ಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ಸಹಕಾರ ಸಂಘಗಳ ಉಪನಿ ಬಂಧಕರು ಮೇಲ್ಕಂಡ ಸಂಘವನ್ನು ಕೂಡಲೇ ರದ್ದು ಪಡಿಸಿ, ಹೊಸ ಆಡಳಿತ ಮಂಡಳಿ ರಚಿಸುವವರೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಹಾಗೂ ಸಂಘದ ಹಣ ದುರುಪ ಯೋಗ ವಾಗಿರುವ ಬಗ್ಗೆ ಸೂಕ್ತತನಿಖೆ ನಡೆಸಬೇಕು ಎಂದು
ಅವರು ಆಗ್ರಹಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button