ಕ್ರೈಂ

ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯ,ಮಲೆನಾಡ ಹುಡುಗಿಯ ಪ್ರೀತಿಗಾಗಿ ಬಂದವನು ಎರಡನೇ ಅಟೆಂಪ್ಟ್ ನಲ್ಲಿ ಪೊಲೀಸರ ಅತಿಥಿ ಆಗಿದ್ದು ಹೇಗೆ?

20220803_194106

ಸುದ್ದಿಲೈವ್.ಕಾಂ/ಶಿವಮೊಗ್ಗ

ಇನ್ ಸ್ಟಾ ಗ್ರಾಮ್ ನಲ್ಲಿ ಯವತಿಯನ್ನ ಪಟಾಯಿಸಿಕೊಂಡು ಸಿಕ್ಕಿಬಿದ್ದಿದ್ದ ಅನ್ಯ ಜಿಲ್ಲೆಯ ಯುವಕ ಮತ್ತೆ ಅದೇ  ಯುವತಿಯನ್ನ ಕರೆದುಕೊಂಡು ಹೋಗಲು ಯತ್ನಿಸುವಾಗ   ಮಾಳೂರು ಪೊಲೀಸ್ ಠಾಣೆಯ ಅತಿಥಿಯಾಗಿದ್ದಾನೆ.

ಇನ್ ಸ್ಟಾ ಗ್ರಾಮ್ ನಲ್ಲಿ ಎರಡು ತಿಂಗಳ ಹಿಂದೆ ಪರಿಚಯವಾಗಿದ್ದ ತನ್ನ ಯುವತಿಯನ್ನ ಪಟಾಯಿಸಿಕೊಂಡು ಪ್ರೀತಿ ಪ್ರೇಮ ಎಂಬ ಭಾವನೆ ಮೂಡಿಸಿ ಶಿವಮೊಗ್ಗಕ್ಕೆ ಬರುವಂತೆ ಮಾಡಿದ್ದನು. ಆಟೋದವರ ಬಳಿ ಸಿಲುಕಿಕೊಂಡು ಯುವಕ ಪರಾರಿಯಾಗಿದ್ದನು.

ಮನೆಯಲ್ಲಿ ಯುವತಿ ನಾಪತ್ತೆಯಾಗಿರುವ ಬಗ್ಗೆ ವಾಟ್ಸಪ್ ಇನ್ಟಾಗ್ರಾಮ್, ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಅವರ ತಂದೆ ಯುವತಿ ನಾಪತ್ತೆಯಾಗಿರುವುದನ್ನ ಹರಿಬಿಟ್ಟಿದ್ದರು. ಇಬ್ಬರೂ ಶಿವಮೊಗ್ಗಕ್ಕೆ ಬಂದಾಗ ಆಟೋದವರೋರ್ವರಿಗೆ ಸಿಲುಕಿ ಯುವತಿ ಸುರಕ್ಷಿತವಾಗಿ ವಾಪಾಸ್ ಪೋಷಕರನ್ನ‌ ಸೇರಿದ್ದಳು.

ಈಗ ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಮಳಲಮಕ್ಕಿ ಗ್ರಾಮದಲ್ಲಿ ಯುವತಿಯನ್ನ ಮತ್ತೆ ಕರೆದುಕೊಂಡು ಹೋಗಲು ಯತ್ನಿಸಿದಾಗ ಸ್ಥಳೀಯರ ಸಹಾಯದಿಂದ ಯುವತಿಯ ತಂದೆ ಆತನನ್ನ ಹಿಡಿದು ಮಾಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಮನು(21) ಎಂಬಾತನು ಯವತಿಯನ್ನ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಪ್ರೀತಿ ಪ್ರೇಮದ ಸಂಕೋಲೆಯಲ್ಲಿ ಸಿಲುಕಿಸಿ ಮೋಸ ಮಾಡುವ ಪ್ರವೃತ್ತಿಯನ್ನ ಹೊಂದಿದವನು ಎಂದು ಹೇಳಲಾಗುತ್ತಿದೆ.‌ ಪೊಲೀಸರು ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಮಾಳೂರು ಪೊಲೀಸ್ ಠಾಣೆ ಮುಂದೆ ಇಂದು ಜನ ಜಾತ್ರೆಯಾಗಿದೆ. ಅಪ್ರಾಪ್ತೆ ಬಾಲಕಿಯ ತಂದೆ ದೂರು ಕೊಡಲು ಮುಂದಾಗಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button