ಪುಚ್ಚಿ ಕಿರಣ್ ಕೊಲೆ


ಸುದ್ದಿಲೈವ್. ಕಾಂ/ಶಿವಮೊಗ್ಗ
ನಗರದ ಹೊರವಲಯದಲ್ಲಿ ಓರ್ವನನ್ನಕೊಲೆ ಮಾಡಲಾಗಿದ್ದು ಆತನನ್ನ ಪುಚ್ಚಿ ಕಿರಣ್ ಎಂದು ಗುರುತಿಸಲಾಗಿದೆ.
ಹೊಸಮನೆ ಏರಿಯಾದ ಹುಡುಗನಾಗಿರುವ ಈತನನ್ನ ಕೊಲೆ ಮಾಡಲಾಗಿದೆ. ನಿನ್ನೆ ಕುಡಿಯಲು ತೆರಳಿದ್ದ ಕಿರಣ್ ಜೊತೆ ಇಬ್ವರು ಸ್ನೇಹಿತರು ತೆರಳಿದ್ದು ಕುಡಿತದ ನಶೆಯಲ್ಲಿ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಕಿರಣ್ ಮತ್ತು ಇಬ್ಬರ ಸ್ನೇಹಿರ ನಡುವೆ ಜಗಳ ಉಂಟಾಗಿದ್ದು ಸ್ನೇಹಿತರು ಬಿಯರ್ ಬಾಟಲಿಯಿಂದ ಇಡೆದು ಮತ್ತು ಕಲ್ಲಿಗೆ ಜಜ್ಜಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಕೆಮಾಡಿದವನನ್ನ ಕಾರ್ತಿಕ್ ಎಂದು ಗುರುತಿಸಲಾಗಿದೆ. ಮತ್ತೋರ್ವನನ್ನ ಇನ್ನೂ ಪತ್ತೆ ಹಚ್ಚಬೇಕಿದೆ.
ಪ್ರಕರಣ ಸಾಗರ ರಸ್ತೆಯ ಪಕ್ಕದ ಬಾರ್ ಒಂದರಲ್ಲಿ ಘಟನೆ ನಡೆದಿದೆ. ವಿನೋಬ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆಗಿ19 ದಿನಗಳ ನಂತರ ಮತ್ತೊಂದು ಕೊಲೆ ಶಿವಮೊಗ್ಗ ಜನರನ್ನಬೆಚ್ಚಿ ಬೀಳಿಸಿದೆ.
ಕಿರಣ್ ಹೊಡೆದಾಟ ಮತ್ತು ಇತರೆ ಸಣ್ಣಪುಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಭ ಮಾಹಿತಿ ಲಭ್ಯವಾಗಿದೆ

