ಕ್ರೈಂ

ಕೆಆರ್ ಪುರಂ‌ ಕೆಪಿಎಸ್ ಶಾಲೆಯಲ್ಲಿ ಕಳುವು

ಸುದ್ದಿಲೈವ್. ಕಾಂ/ಶಿವಮೊಗ್ಗ

ನಗರದ ಕೆಆರ್ ಪುರಂ ಶಾಲೆಯಲ್ಲಿ ಕಳುವಾಗಿದ್ದು, 30 ಸಾವಿರ ರೂ ಮೌಲ್ಯದ ವಿದ್ಯುತ್ ಬಂಡಲ್ ಗಳು ನಾಪತ್ತೆಯಾಗಿವೆ.

ಕೆಆಋ್ಈ ಪುರಂನ ಕೆಪಿಎಸ್ ಶಾಲೆಯಲ್ಲಿ ಜು.30 ರಂದು ಮಧ್ಯಾಹ್ನ 12.30 ರಿಂದ ಆ.1 ರ ಸೋಮವಾರದ ವರೆಗೆ ರಜೆ ಇರುವುದರಿಂದ ಶಾಲೆ ಬಾಗಿಲು ಹಾಕಿದ್ದು, ಈ ವೇಳೆಯಲ್ಲಿ ಕಳುವು ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಶಾಲೆಯ ಕೊಠಡಿಗಳ ಎದರುಗಡೆ ಅಳವಡಿಸಿದ್ದ ವಿದ್ಯುತ್‌ ವಯರ್ ಗಳನ್ನು ಕಳವು ಮಾಡಲಾಗಿದೆ. ಸುಮಾರು ಅಂದಾಜು 30,000/- ರೂ ಬೆಲೆ ಬಾಳುವ 25 ನ 3 ಬಂಡಲ್ ಮತ್ತು 15 ನ 2 ಬಂಡಲ್ ವಯರ್ ಗಳನ್ನು ಕಳ್ಳತನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಧಾನೇಶ್ವರಿ ಎಂಬುವರು ಕಳೆದ ಎರಡು ತಿಂಗಳ ಹಿಂದೆ  ರಟ್ಟಿಹಳ್ಳಿ ಶಾಲೆಯಿಂದ ವರ್ಗಾವಣೆಯಾಗಿ ಹಾಲಿ ಶಿವಮೊಗ್ಗ ಕೆಪಿಎಸ್‌ ಕೆ ಆರ್ ಪುರಂ ಶಾಲೆಯಲ್ಲಿ, ಮುಖ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಶಾಲೆಯ ಸಂಬಂಧಪಟ್ಟ ಮೇಲಾಧಿಕಾರಿಗಳಿಗೂ ಹಾಗೂ ಶಾಲೆಯ ಎಸ್‌.ಡಿ.ಎಂ.ಸಿ ರವರಿಗೆ ಮಾಹಿತಿಯನ್ನು ನೀಡಿ ನಂತರ ದೊಡ್ಡಪೇಟೆ ಪೊಲೀಸ್‌ ಠಾಣೆಗೆ  ಕಳವು ಪ್ರಕರಣ ದಾಖಲಿಸಿದ್ದಾರೆ.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button