ಕ್ರೈಂ
ಮೆಗ್ಗಾನ್ ಲೇಬರ್ ವಾರ್ಡ್ ನಿಂದ ಅಪ್ರಾಪ್ತೆ ಬಾಲಕಿ ದಿಡೀರ್ ನಾಪತ್ತೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಪ್ರಾಪ್ತೆ ಬಾಲಕಿಯೊಬ್ಬಳು ನಾಪತ್ತೆಯಾಗಿರುವುದಾಗಿ ಅವರ ತಾಯಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಲ್ಯ ವಿವಾಹವಾಗಿದ್ದ ಕಾರಣ ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಬಾಲಕಿಯನ್ನ ಬಾಲಮಂದಿರದಲ್ಲಿ ಸೇರಿಸಲಾಗಿತ್ತು. ಬಾಲಮಂದಿರದವರು ಬಾಲಕಿಯನ್ನ ಮೆಗ್ಗಾನ್ ಗೆ ಕರೆದುಕೊಂಡು ಹೋಗುತ್ತಿದ್ದೇವೆ ಆಸ್ಪತ್ರೆಗೆ ಬರಲು ಹುಡುಗಿ ತಾಯಿಗೆ ತಿಳಿಸಿದ್ದರು.
ಜು.29 ರಂದು ಬಾಲಕಿಯನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಿನ್ನೆಯಿಂದ ಬಾಲಕಿ ದಿಡೀರ್ಎಂದು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಬಾಲಕಿ ತಾಯಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲೇಬರ್ ವಾರ್ಡ್ ನಲ್ಲಿ ದಾಖಲಾಗಿದ್ದ ಬಾಲಕಿ ಇಷ್ಟು ದೊಡ್ಡಪ್ರಮಾಣದಲ್ಲಿ ಇರುವ ಸಿಬ್ಬಂದಿಗಳು ಇದ್ದರೂ ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಮೆಗ್ಗಾನ್ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ ಎಂಬುದಕ್ಕೆ ಇದೂ ಸಹ ಒಂದು ಕೈಗನ್ನಡಿಯಾಗಿದೆ.

