ಕ್ರೈಂ

ಜೋಗ ನೋಡಿಕೊಂಡು ಬರುತ್ತಿದ್ದ ಮಾರುತಿ ಇಕೋ ವಾಹನಕ್ಕೆ ಟೂರಿಸ್ಟ್ ಬಸ್ ಡಿಕ್ಕಿ-ಓರ್ವ ಸಾವು,6 ಮಂದಿ ತೀವ್ರಗಾಯ

IMG-20220801-WA0111

ಸುದ್ದಿಲೈವ್.ಕಾಂ/ಸಾಗರ

ತಾಲೂಕಿನ ತಾಳಗುಪ್ಪದ ಅಲಳ್ಳಿಯ ಬಳಿ ರಸ್ತೆ ಅಪಘಾತ ಉಂಟಾಗಿದ್ದು ರಸ್ತೆ ಅಪಘಾತದಲ್ಲಿ ಮಾರುತಿ ಇಕೋ ವಾಹನ ಸವಾರನೋರ್ವ ಸ್ಥಳದಲ್ಲಿಯೇ ಸಾವುಕಂಡಿದ್ದಾನೆ. ಆರು ಜನರನ್ನ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೋಗದಿಂದ ಚನ್ನಗಿರಿಗೆ ತಡರಳುತ್ತಿದ್ದ ಮಾರುತಿ ಇಕೋ ವಾಹನಕ್ಕೂ ಎದುರಿನಿಂದ ಬಂದ ಖಾಸಗಿ ಟೂರಿಸ್ಟ್ ಬಸ್ ಗೂ ಆಲಳ್ಳಿಯ ಬಳಿ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಈ ಡಿಕ್ಕಿಯಲ್ಲಿ ಇಕೋ ವಾಹನದಲ್ಲಿದ್ದ ಶಾಭಾಜ್(23) ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇಕೋ ವಾಹನದಲ್ಲಿದ್ದ ರಿಹಾನ್ (14), ತಬಸ್ಸುಮ್(23), ಶಿಫಾ(27), ಖಮರುನ್ನೀಸಾ(45), ಜಬ್ರುನ್(55), ಮಹ್ಮದ್ ಉಸ್ಮಾನ್(25) ಆರು ಜನರಿಗೆ ತೀವ್ರ ಗಾಯಗಳಾಗಿವೆ. ಇವರನ್ನ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿವಮೊಗ್ಗ ಮೆಗ್ಗಾನ್ ಗೆ ಸಾಗಿಸಲಾಗಿದೆ.

ಇವರೆಲ್ಲರೂ ಜೋಗವನ್ನ ನೋಡಿಕೊಂಡು ವಾಪಾಸ್ ಚನ್ನಗಿರಿಗೆ ಹೋಗುವಾಗ ಬಳೇಗಾರ ಬಳಿ ಅಪಘಾತವಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.IMG-20220801-WA0110

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button