ರಾಜಕೀಯ

ಮುಸ್ಲೀಂ ಮನೆಗೆ ಭೇಟಿ ನೀಡಬಾರದು ಎಂಬ ದುರುದ್ದೇಶ ಇಲ್ಲ-ಆರಗ ಸ್ಪಷ್ಟನೆ

ಸುದ್ದಿಲೈವ್. ಕಾಂ/ಶಿವಮೊಗ್ಗ

ಕೇವಲ ಪ್ರವೀಣ್ ಮನೆಗೆ ಮಾತ್ರ ಭೇಟಿ ಕೊಟ್ಟು ಮುಸಲ್ಮಾನ್ ಮನೆಗೆ ಹೋಗಿಲ್ಲ ಎಂಬ ಆರೋಪದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದು, ಸಮಯ ಮತ್ತು ಕೆಲ ಗುಂಪುಗಾರಿಕೆಯ ಕಾರಣದಿಂದ ಮುಸ್ಲೀಂ ಮನೆಗೆ ಭೇಟಿ ನೀಡಿಲ್ಲವೆಂದರು.

ಜಿಪಂ ಸಭೆಯ ನಂತರ ಮಾಧ್ಯಮಗಳಿಗೆ ಮಾತನಾಡಿ ಮುಸ್ಲೀಂ  ಮನೆಗೆ ಹೋಗಬಾರದು ಎಂಬ ದುರುದ್ದೇಶ ಇಲ್ಲ. ಸಮಯ ಅಭಾವವಿದ್ದ ಕಾರಣ ಭೇಟಿ ನೀಡಲು ಆಗಿಲ್ಲ. ಅಲ್ಲದೇ ಆವತ್ತು ಸ್ವಲ್ಪ ಮಾಬ್ ಇತ್ತು ಆ ಸಂದರ್ಭದಲ್ಲಿ ಬೇಡ ಅಂತಾ ಹೋಗಿರಲಿಲ್ಲ ಎಂದರು.

ಇನ್ನೊಂದು ದಿನ ಭೇಟಿ ಕೊಡುತ್ತೇವೆ.ಸರಕಾರ ಯಾವುದೇ ಫೆಲ್ಯೂರ್ ಇಲ್ಲ. ಚುನಾವಣೆಗೆ ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಬಹಳ ಆತುರರಾಗಿದ್ದಾರೆ. ಈ ಆತುರ ಬೇಡ. ಮುಂದಿನ ಬಾರಿ ಸಹ ನಾವೇ ಅಧಿಕಾರಕ್ಕೆ ಬರೋದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಟಾಂಗ್ ನೀಡಿದರು.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button