ಸ್ಥಳೀಯ ಸುದ್ದಿಗಳು

ಕಾರ್ಗಲ್ ಆರ್ ಎಫ್ ಒ ವಿರುದ್ಧ ಕ್ರಮಕ್ಕೆ ಕೆಡಿಪಿ ಸಭೆ ಅಸ್ತು-ದಿಡೀರಂತ ಸಭೆಯಲ್ಲಿ ಅಪರಿಚಿತ ಪ್ರತ್ಯಕ್ಷ ಪ್ರವೇಶ ದ್ವಾರದಲ್ಲಿ ಎಎಸ್ಐ ನೇಮಕ

IMG-20220730-WA0325

ಸುದ್ದಿಲೈವ್.ಕಾಂ/ಶಿವಮೊಗ್ಗ

ಅರಣ್ಯ ಇಲಾಖೆಯ ಕಾರ್ಗಲ್ ವನ್ಯಜೀವಿ ಆರ್ ಎಫ್ ಒ ರನ್ನ ಅಮಾನತ್ತಿನಲ್ಲಿಡುವಂತೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿರ್ಣಯಗೊಳ್ಳಲಾಯಿತು.

ಸಾಗರ ತಾಲ್ಲೂಕಿನ ಉರುಳುಗಲ್ಲು ರೈತರ ಮೇಲಿನ ದೌರ್ಜನ್ಯ ಖಂಡಿಸಿ ಅಗಸ್ಟ್ 5 ರಂದು ಚನ್ನಗೊಂಡ ಗ್ರಾಮದ ಬಿಳಿಗಾರಿನಿಂದ ಕಾರ್ಗಲ್ ವಲಯ ಅರಣ್ಯಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮತ್ತು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಮರವನ್ನ‌ಕಡಿದಿರುವುದು ನಿಜ ಆದರೆ ಆ ರೈತನಿಗೆ ಕಣ್ಣಿಗೆ ಬಟ್ಟೆ ಕಟ್ಟಿ ರೌಡಿ ಶೀಟರ್ ಗಳಿಗೆ ಸ್ಲೇಟು ಹಿಡಿಯುವಂತೆ ರೈತನ ಕೈಗೆ ಸ್ಲೇಟು ಕೊಟ್ಟು ಅಪರಾಧಿ ನಂಬರ್ ನೀಡಲಾಗಿದೆ. ಈ ಬಗ್ಗೆ ಆರ್ ಎಫ್ ಒಗೆ ಕರೆ ಮಾಡಿದರೆ ಉದ್ಧಟತನವಾಗಿ ಮಾತನಾಡುತ್ತಾರೆ. ಹಾಗಾದರೆ ನಮ್ಮ ಪರಿಸ್ಥಿತಿ ಏನು?

ಅವರು ಪ್ರತಿಭಟನೆ ಮಾಡುವುದು ಸಹಜ. ಆದರೆ ನಮ್ಮ ಸ್ಥಿತಿ ಏನಾಗಬೇಕು? ರೈತರನ್ನ ಈ ರೀತಿ ನಡೆಸಿಕೊಂಡರೆ ಹೇಗೆ ಹಾಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಧ್ಯ ಪ್ರವೇಶಿಸಿ ಸಿಸಿ ಎಫ್ ಮೂಲಕ ಕ್ರಮ ಕೈಗೊಳ್ಳಬೇಕು. ಆರ್ ಎಫ್ ಒರನ್ನ ವರ್ಗಾವಣೆ ಅಥವಾ ಅಮಾನತ್ತುಗೊಳಿಸುವಂತೆ ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು‌ ಸಹ ಶಾಸಕ ಹಾಲಪ್ಪನವರ ಹೇಳಿಕೆಯನ್ನ ಬೆಂಬಲಿಸಿದರು. ಡಿಸಿಯವರು ಸಿಸಿಎಫ್ ನವರಿಗೆ ಆರೋಗ್ಯ ಸರಿಯಿಲ್ಲ ಅವರ ಗಮನಕ್ಕೆ ಈ ವಿಷಯ ತರುವುದಾಗಿ ತಿಳಿಸಿದರು.

ಅಪರಿಚಿತರ ಎಂಟ್ರಿ

ಸಭೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕೆಡಿಪಿ ಸಭೆಗೆ ಬಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಗೆ ಮನವಿ ಸಲ್ಲಿಸಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮನವಿ ನೀಡಿದ್ದಾನೆ. ಎಲ್ಲರೂ ಹೊರಗೆ ಇರು ಅಲ್ಲಿ ಮಾತನಾಡುವಂತೆ ಎಂದು ತಿಳಿಸಿದರು.

ನಂತರ ಕುಮಾರ ಬಂಗಾರಪ್ಪನವರ ಹತ್ತಿರ ಬಂದು ನಿಂತಿದ್ದಾನೆ. ಈ ಬಗ್ಗೆ ಗಮನ ಹರಿಸಿದ ಶಾಸಕರು ಸಭೆಯ ಮಧ್ಯೆ ದಿಡೀರಂತ ಬಂದರೆ ಏನು ಮಾಡುವುದು ಎಂದು ಜಿಲ್ಲಾಧಿಕಾರಿ ಮತ್ತು ಸಿಇಒ ರವರ ಗಮನಕ್ಕೆ ತಂದಿದ್ದಾರೆ.

ಶಾಸಕರು ಏರು ಧ್ವನಿಯಲ್ಲಿ ಮಾತನಾಡುತ್ತಿದ್ಸಂತೆ ಅಪರಿಚಿತ ಹೊರಗೆ ಬಂದಿದ್ದಾನೆ. ಸಭೆಯ ಪತ್ರಕರ್ತರ ಗ್ಯಾಲರಿಯಲ್ಲಿ ಹಲವು ಜನ ರೈತರು ಮನವಿ ಹಿಡಿದುಕೊಂಡು ಬಂದಿದ್ದರು ಅವರನ್ನ ಹೊರಗೆ ಕಳುಹಿಸಿ ಪ್ರವೇಶದ್ವಾರದ ಬಳಿ ಎಎಸ್ ಐ ರವರನ್ನ ಸಭೆಯ ಬಿಡದಂತೆ ಬಂದೋಬಸ್ತ್ ಮಾಡಲಾಯಿತು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button