ಕ್ರೈಂ

ಭದ್ರಾವತಿಯಲ್ಲಿ ಪ್ರತಿಭಟನೆ ವೇಳೆ ಅಂಗಡಿಗೆ ನುಗ್ಗಿ ಗಲಾಟೆ ಮಾಡಿದ 6 ಜನರ ವಿರುದ್ಧ ಎಫ್ಐಆರ್

ಸುದ್ದಿಲೈವ್. ಕಾಂ/ಭದ್ರಾವತಿ

ಕನ್ಹಯ್ಯ ಲಾಲ್ ಕಗ್ಗೊಲೆ ಖಂಡಿಸಿ ಭಾನುವಾರ ಭದ್ರಾವತಿಯ ರಂಗಪ್ಪ ವೃತ್ತದ ಬಳಿ ಪ್ರತಿಭಟನೆ ನಡೆದ ವೇಳೆ ಅಂಗಡಿಯೊಂದರ ಗಾಜು ಪುಡಿ ಪುಡಿ ಮಾಡಲಾದ ಘಟನೆಗೆ ಸಂಬಂಧಿಸಿದಂತೆ 6 ಜನ ಬಜರಂಗದಳದ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.

ಸ್ವಾಗ್ ಮೆನ್ಸ್ ಫ್ಯಾಷನ್ ಅಂಗಡಿಯಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಶೌಕತ್ ಅಲಿ ಭಾನುವಾರ ಸಂಜೆ ರಂಗಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಏಕಾಏಕಿ 6ಜನ ಬಜರಂಗದಳ ಕಾರ್ಯಕರ್ತರು ಅಂಗಡಿಗೆ ನುಗ್ಗಿದ್ದಾರೆ.

ಅಕ್ರಮ ಪ್ರವೇಶ ನಡೆಸಿ ಗೊಂಬೆಗಳನ್ನ ಮತ್ತು ಗಾಜುಗಳನ್ನ ಒಡೆದು ಹಾಕಿದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಅಂಗಡಿಯ ಕಂಪ್ಯೂಟರ್ ಗಳನ್ನ ಒಡೆದು ಹಾಕಿದ್ದಾರೆ. ಕತ್ತಿನ ಪಟ್ಟಿ ಹಿಡಿದುಕೊಂಡು ಅವ್ಯಚ್ಯ ಶಬ್ದಗಳಿಂದ ಬೈದಿದ್ದಾರೆ.

ಅಸ್ವಾಗ್ ಎಂಬ ಅಂಗಡಿಯ ಕೆಲಸ ಮಾಡುವ ಹುಡುಗನ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button