ಸ್ಥಳೀಯ ಸುದ್ದಿಗಳು

ಹುಬ್ಬಳ್ಳಿಯಲ್ಲಿ ಕಗ್ಗೊಲೆಯಾದ ಚಂದ್ರಶೇಖರ್ ಗುರೂಜಿ-ಪತ್ನಿಯ ಮನೆಯಲ್ಲಿ ನೀರವ ಮೌನ

IMG-20220705-WA0265

ಸುದ್ದಿಲೈವ್.ಕಾಂ/ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿಯ ಕಗ್ಗೊಲೆ ನಡೆದಿದ್ದು ಅವರ ಪತ್ನಿ ಮನೆ ಮಂಡಗದ್ದೆ ಸಮೀಪದ ಹೆಮ್ಮಕ್ಕಿಯಲ್ಲಿ‌ ನೀರವ ಮೌನ ಆವರಿಸಿದೆ.

ತಮ್ಮ ಅಳಿಯ ಕೊಲೆಯಾದ ಬೆನ್ನಲ್ಲೇ  ಚಂದ್ರಶೇಖರ ಗುರೂಜಿ ಪತ್ನಿಯ ತಂದೆ‌ ರಮೇಶ್ ಹಾಗೂ ತಾಯಿ ಶೈಲಾ ತೆರಳಿದ್ದಾರೆ. ಮೂರು ವರ್ಷದ ಹಿಂದೆ ಅಂಕಿತಾ ಚಂದ್ರಶೇಖರ ಗುರೂಜಿಯನ್ನು ಮದುವೆಯಾಗಿದ್ದರು

ಅಂಕಿತಾ ಕುಟುಂಬದವರು ಮದುವೆಯನ್ನ ಅದ್ಧೂರಿಯಿಂದ ನಡೆಸಿಕೊಟ್ಟಿದ್ದರು. ನಿರಂತರವಾಗಿ ಹೆಮ್ಮಕ್ಕಿಗೆ ಬಂದು ನಾಲ್ಕಾರು ದಿನ ಹೆಂಡತಿ ಮನೆಯಲ್ಲಿ ಗುರೂಜಿ ಇದ್ದು ಹೋಗುತಿದ್ದರು. ಕಳೆದ ಒಂದು ತಿಂಗಳ ಹಿಂದೆ ಹೆಮ್ಮಕ್ಕಿಗೆ ಬಂದು ನಾಲ್ಕು ದಿನ ಇದ್ದು ಹೋಗಿದ್ದರು.

ಚಂದ್ರಶೇಖರ ಗುರೂಜಿ ನೆನೆದು ಅಂಕಿತಾ ಅಜ್ಜಿ ಸಾವಿತ್ರಮ್ಮ ಗದ್ಗದಿತರಾಗಿದ್ದಾರೆ. ಚಂದ್ರಶೇಖರ ಗುರೂಜಿ ಬಗ್ಗೆ ಮುಕ್ತವಾಗಿ  ಸಾವಿತ್ರಮ್ಮ ಮಾತನಾಡಿದ್ದರು. ಗುರೂಜಿ ಒಂದು ತಿಂಗಳ ಹಿಂದೆ ನಮ್ಮನೆಗೆ ಬಂದು ಹೋಗಿದ್ದರು‌. ಇಲ್ಲಿಗೆ ಬಂದಾಗ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತಿದ್ದರು.ಚಂದ್ರಶೇಖರ ಗುರೂಜಿಯನ್ನು ಕಳೆದುಕೊಂಡು ದೇವರನ್ನೇ ಕಳೆದುಕೊಂಡಂತಾಗಿದೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ.

ಗುರೂಜಿ ಹಾಗೂ ಅಂಕಿತಾ ಮುಂಬೈನಲ್ಲಿ‌ ನೆಲಿಸಿದ್ದರು. ಸ್ವಾಮೀಜಿ ಅಣ್ಣನ ಮಗನ ಮಗ ಮೃತಪಟ್ಟಿದ್ದರಿಂದ ಕಾರ್ಯಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು. ಹುಬ್ಬಳ್ಳಿಗೆ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ಅಂಕಿತಾ ಅಜ್ಜಿ ಸಾವಿತ್ರಮ್ಮ ಹೇಳಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button