ಕ್ರೈಂ
ರಿಪ್ಪನ್ ಪೇಟೆಯಲ್ಲಿ ರಸ್ತೆ ಅಪಘಾತ-ದ್ವಿಚಕ್ರ ವಾಹನ ಸವಾರ ಸಾವು

ಸುದ್ದಿಲೈವ್. ಕಾಂ/ರಿಪ್ಪನ್ ಪೇಟೆ
ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿರುವ ಚರ್ಚ್ ಮುಂಭಾಗದಲ್ಲಿ ರಸ್ತೆ ಅಪಘಾತವಾಗಿದ್ದು ದ್ವಿಚಕ್ರವಾಹನ ಸವಾರ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ.
ರಿಪ್ಪನ್ ಪೇಟೆಯಿಂದ ತಮಡಿಕೊಪ್ಪಕ್ಕೆ ಟಿವಿಎಸ್ ಎಕ್ಸಲ್ ನಲ್ಲಿ ಹೋಗುತ್ತಿದ್ದ ದಿನೇಶ್ ಟಿಹೆಚ್ ರಿಗೆ ಹಿಂಬದಿಯಿಂದ ಬಂದ ತರಕಾರಿ ಹೊತ್ತು ಹೋಗುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ದಿನೇಶ್(41) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕ್ಯಾಂಟರ್ ತರಕಾರಿಯನ್ನ ಹೊತ್ತು ಹಿರೇಕೆರೂರಿನಿಂದ ಉಡುಪಿ ಹೋಗುತ್ತಿತ್ತು ಎನ್ನಲಾಗಿದೆ. ರಿಪ್ಪನ್ ಪೇಟೆಯಲ್ಲಿ ಕೃಷಿ ಸಾಮಾಗ್ರಿಗಳನ್ನ ಖರೀದಿಸಿ ವಾಪಾಸ್ ತಮಡಿಕೊಪ್ಪಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನೇಶ್ ಮೃತ ದೇಹವನ್ನ ಶಿವಮೊಗ್ಗದ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ತರಲಾಗಿದೆ.

