ಶಿಕ್ಷಣ

ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನದಿಂದ ಆನ್ ಲೈನ್ ನಲ್ಲಿ ಭಕ್ತಿ ಸಂಕೀರ್ತನಾ ಗಾಯನ ಅಭಿಯಾನ

ಸುದ್ದಿಲೈವ್.ಕಾಂ/ಶಿವಮೊಗ್ಗ

ಬಸವನಗುಡಿಯ ಶೃಂಗೇರಿ ಹೆಚ್ ಎಸ್ ನಾಗರಾಜ್ ರವರ ಶ್ರೀಗುರುಗುಹ ವಾಗ್ಗೇಯ ಪ್ರತಿಷ್ಠಾನ ಈಗ ಆನ್ ಲೈನ್ ನಲ್ಲಿ ಭಕ್ತಿ ಸಂಕೀರ್ತನಾ ಗಾಯನ ಕಲಿಯುವರಿಗಾಗಿ ಸುವರ್ಣಾವಕಾಶವನ್ನ ತೆರೆದಿಟ್ಟಿದೆ. Online ಮುಖಾಂತರ ಮಹಿಳೆಯರಿಗೆ ಭಕ್ತಿ ಸಂಕೀರ್ತನಾ ಗಾಯನ ಉಚಿತ ಶಿಕ್ಷಣ ಅಭಿಯಾನವನ್ನ ಆರಂಭಿಸಿದೆ.

ಮನೆಯಲ್ಲಿಯೇ ಕುಳಿತು ದಾಸ ಸಾಹಿತ್ಯ, ವಚನ ಸಾಹಿತ್ಯ, ನಾಮ ಸಂಕೀರ್ತನಾ ಮುಂತಾದ ಭಕ್ತಿ ಸಾಹಿತ್ಯಗಳನ್ನು ಕಲಿಯುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಇದುವರೆವಿಗೆ ಶ್ರೀ ಗುರುಗುಹ ಸಂಸ್ಥೆಯು ನಾಡಿನಾದ್ಯಂತ ಪ್ರತೀ ವರ್ಷ, ದೇವರನಾಮ ಉಚಿತ ಶಿಬಿರದಲ್ಲಿ ಶ್ರೀ ಪುರಂದರದಾಸರ ಪದವನ್ನೇ ಬಹುಮುಖ್ಯವಾಗಿ ಕಲಿಸಲಾಗುತ್ತಿತ್ತು.

ಆದರೆ, ಈ ವರ್ಷದಿಂದ ಅಂದರೆ, 2022-23ನೇ ಸಾಲಿನಿಂದ, ಪ್ರತೀ ಭಾನುವಾರವೂ ವಿವಿಧ ವೇಳಾಪಟ್ಟಿಅಡಿಯಲ್ಲಿ Online ಮುಖಾಂತರ ಸುಲಲಿತ ರಾಗಸಂಯೋಜನೆ ಹೊಂದಿದ ದಾಸಸಾಹಿತ್ಯ, ವಚನಸಾಹಿತ್ಯ ಹಾಗೂ ಹಲವಾರು ಭಕ್ತಿಸಾಹಿತ್ಯಗಳನ್ನ ರಚನೆಗಳ ಗಾಯನ ತರಗತಿಗಳನ್ನು ಉಚಿತವಾಗಿ ನಡೆಸಲು ನಿಶ್ಚಯಿಸಲಾಗಿದೆ.ಈ ತರಗತಿಯಲ್ಲಿ ಭಾಗವಹಿಸುವವರಿಗೆ ನಿಯಮಾವಳಿಗಳು ಹೀಗಿವೆ.

೧. ಹದಿನೈದು ವರ್ಷ ಮೇಲ್ಪಟ್ಟ ಮಹಿಳೆಯರು ಈ ಶಿಕ್ಷಣ ಅಭಿಯಾನದಲ್ಲಿ ಭಾಗವಹಿಸುವುದು.೨. ತರಗತಿಗೆ ಭಾಗವಹಿಸುವ ಮಹಿಳೆಯರಿಗೆ ಯಾವುದೇ ರೀತಿಯ ಶಾಸ್ತ್ರೀಯ ಸಂಗೀತ ಶಿಕ್ಷಣದ ಅವಶ್ಯಕತೆ ಇರುವುದಿಲ್ಲ, ಪ್ರವೇಶಧನವಿರುವುದಿಲ್ಲ. ವೃತ್ತಿನಿರತ ಮಹಿಳೆಯರಿಗಿದೊಂದು ಉತ್ತಮ ಅವಕಾಶ,

೩. ವಿವಿಧ ದಾಸರ, ಸಂತರ ರಜಣಿಗಳ ತರಗತಿಗಳಾದದ್ದರಿಂದ, Thematic ಆಗಿ ರಚನೆಗಳ ಆಯ್ಕೆ ಮಾಡಲಾಗಿರುತ್ತದೆ. ೪. ಪ್ರತೀ ಭಾನುವಾರ ಐದು ಪ್ರತ್ಯೇಕ ಸಮಯದಲ್ಲಿ ನಡೆಯುವ ಈ ತರಗತಿಗಳಲ್ಲಿ, ತಾವು ನೀಡಲಿರುವ ಅರ್ಜಿಯಲ್ಲಿ ಯಾವ ಸಮಯವನ್ನು ಆಯ್ಕೆಮಾಡಿಕೊಂಡಿರುತ್ತೀರೋ ಅದಕ್ಕೇ ಬದ್ಧವಾಗಿರತಕ್ಕದ್ದು೫. ಪ್ರತೀ ತರಗತಿಯಲ್ಲಿ ದೊರೆಯುವ ಪಾಠವನ್ನು ಧ್ವನಿಮುದ್ರಿಸಿಕೊಂಡು, ಅಭ್ಯಾಸ ಮಾಡತಕ್ಕದ್ದು,

೬. WatsAppನಲ್ಲಿ ಕಳುಹಿಸಲಾದ, Online ತರಗತಿಯಲ್ಲಿ ಕಲಿಸುವ ಗೀತೆಗಳ ಸಾಹಿತ್ಯವನ್ನು ತಾವು ಮುದ್ರಿಸಿಕೊಂಡು ಅದರ ಪ್ರತಿಯನ್ನು ಕಾಪಾಡಿಕೊಳ್ಳುವುದು. ೭ ಈ Online ತರಗತಿಗೆ ಕರ್ನಾಟಕ, ಹೊರರಾಜ್ಯ ಹೊರ ದೇಶದಲ್ಲಿರುವ ಕನ್ನಡ ಭಾಷೆ ಬರುವ ಎಲ್ಲಾ ಮಹಿಳೆಯರು ಭಾಗವಹಿಸುವ ಅವಕಾಶವಿರುತ್ತದೆ.

೮. ತಾ| 07 ಆಗಸ್ಟ್ 2022 ಇಂದ ಈ ಶಿಕ್ಷಣ ಅಭಿಯಾನ ಪ್ರಾರಂಭವಾಗುತ್ತದೆ. ೯. ಹಿಂದಿನ Online ತರಗತಿಯಲ್ಲಿ ನೀಡಲಾಗಿರುವ ಶಿಕ್ಷಣವನ್ನು ಮುಂದಿನ Online ತರಗತಿಯಲ್ಲಿ ಪುನಃ ಅಭ್ಯಾಸ ಮಾಡಿಸಲು ಅವಕಾಶಇರುವುದಿಲ್ಲ.

ಪ್ರಾರಂಭಿಕ ತರಗತಿಯು ಮಾತ್ರ ಎಲ್ಲರಿಗೂ ಒಟ್ಟಿಗೆ ಉದ್ಘಾಟನಾ ಸಮಾರಂಭದೊಂದಿಗೆ ಒಂದೇ ಸಮಯದಲ್ಲಿ ಆರಂಭವಾಗುತ್ತದೆ.ದೇವರನಾಮ ಅಭಿಯಾನದ ತರಗತಿಗಳಿಗೆ ನೊಂದಾಯಿಸದೆ ಹಾಗೂ ಭಾಗವಹಿಸದೇ ಕೇವಲ ತರಗತಿಯ ಧ್ವನಿಮುದ್ರಣವನ್ನು ಬೇರೆಯವರಿಂದ ಪಡೆದುಕೊಂಡವರನ್ನು ಶಿಬಿರಾರ್ಥಿಗಳೆಂದು ಪರಿಗಣಿಸುವುದಿಲ್ಲ. ಭಕ್ತಿರಚನ ಉಚಿತ ಗಾಯನ ಶಿಬಿರಕ್ಕೆ ಭಾಗವಹಿಸಲಿರುವವರು Online ಮುಖಾಂತರ ಕೆಳಗಿನ Application ಅನ್ನು ಭರ್ತಿ ಮಾಡಿ ಸಲ್ಲಿಸುವುದು.

ಒಮ್ಮೆ Application Form ಅನ್ನು ಭರ್ತಿ ಮಾಡಿ ಸಲ್ಲಿಸಿದ ಅಭ್ಯರ್ಥಿಗಳು Online ತರಗತಿಗಳಿಗೆ ನಿರಂತರವಾಗಿ ಭಾಗವಹಿಸುವುದು ಅತಿ ಅವಶ್ಯಕ.Online ತರಗತಿಗಳಲ್ಲಿ ಐದರಿಂದ – ಎಂಟು ರಚನೆಗಳ ಶಿಕ್ಷಣ ದೊರೆತ ನಂತರ ಎರಡು ತಿಂಗಳಿಗೊಮ್ಮೆ Offline ಮುಖಾಂತರ ಎಲ್ಲಾ ವಚನೆಗಳ ಪುನರಾವರ್ತನೆಗೆ ಅವಕಾಶ ಮಾಡಿಕೊಳ್ಳಲಾಗುತ್ತದೆ.

Thematic ಆಗಿ ರಚನೆಗಳ ಆಯ್ಕೆ ಆಗಿರುವುದರಿಂದ ಈ Offline ತರಗತಿಯು ಧಾರ್ಮಿಕ ಪ್ರವಾಸದ ರೀತಿಯಲ್ಲಿ ದೇವತಾ ದಿವ್ಯ ಕ್ಷೇತ್ರಗಳಲ್ಲಿ ಅಥವಾ ಐತಿಹಾಸಿಕ ದೇವಸ್ಥಾನಗಳಲ್ಲಿ ನಡೆಯುತ್ತಿದೆ.ಈ Offline ತರಗತಿಯಲ್ಲಿ ಭಾಗವಹಿಸುವವರು ಬಂದು ಹೋಗುವ ಪ್ರಯಾಣದ ವೆಚ್ಚವನ್ನು ತಾವೇ ಭರಿಸುವುದು ಹಾಗೂ Online ತರಗತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳೆಲ್ಲರಿಗೂ ಈ Offline ತರಗತಿಯ ಪುನರಾವರ್ತನೆ ಅಭ್ಯಾಸಕ್ಕೆ ಭಾಗವಹಿಸುವುದು ಕಡ್ಡಾಯವೇನಲ್ಲ,

ಎರಡು ತಿಂಗಳಿಗೊಮ್ಮೆ ನಡೆಯುವ Offline ತರಗತಿಯ ಸಂಪೂರ್ಣ ನೀತಿ-ನಿಬಂಧನೆಗಳನ್ನು ನಂತರದಲ್ಲಿ ತಿಳಿಸಲಾಗುತ್ತದೆ. ಈ ಅಭಿಯಾನದ ಪ್ರಾರಂಭಿಕ ಅವಧಿ ಕೇವಲ ಆರು ತಿಂಗಳು ಮಾತ್ರOnline ಮುಖಾಂತರ ಅರ್ಜಿ ಸಲ್ಲಿಸಿದ ನಂತರ ತಮಗೆ ಈ-ಮೇಲ್ ಅಥವಾ WatsApp ಮುಖಾಂತರ, ಶಿಕ್ಷಣ ನೀಡುವ ಶಿಕ್ಷಕಿಯರ ಹೆಸರು, ಮೊಬೈಲ್ ನಂಬರ್ ತಲುಪಿಸಲಾಗುತ್ತದೆ. Application Submission ಕೊನೆಯ ದಿನಾಂಕ : ತಾ 01 ಆಗಸ್ಟ್ 2022,ಈ ಮೇಲಿನ ಎಲ್ಲಾ ನಿಬಂಧನೆಗಳನ್ನು ಹೊರತುಪಡಿಸಿ, ಯಾವುದೇ ರೀತಿಯ ಅನವಶ್ಯಕ ಚರ್ಚೆಗಳಿಗೆ ಅವಕಾಶವಿರುವುದಿಲ್ಲ.

ಅವಕಾಶವಾದ ಪಕ್ಷದಲ್ಲಿ Offline ಮುಖಾಂತರ ಅಭ್ಯಾಸಿಗಳಿಂದಲೇ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಅಭಿಯಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿದ್ದರೆ ಈ ಕೆಳಕಂಡ ಇ-ಮೇಲ್ music-guruguha@gmail.com ಕಳುಹಿಸುವದು, ಅಥವಾ ಭಾರತೀಯ ಕಾಲಮಾನ ಬೆಳಿಗ್ಗೆ 11.30 ಇಂದ 12.30ರ ವರೆಗೆ ದೂರವಾಣಿ ಸಂಖ್ಯೆ ಗಳನ್ನು , ಮೊ: 9448241149, 9480915777 ಸಂಪರ್ಕಿಸಬಹುದಾಗಿದೆ. ಮಾಹಿತಿಗಾಗಿ ಮತ್ತು ನೋಂದಾಯಿಸಲು: bhakthisankeerthana.com ಕ್ಲಿಕ್ಕಿಸಬಹುದು

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button