ಕ್ರೈಂ

ಪೊಲೀಸರ ಮನೇನೂ ಬಿಡಲಿಲ್ಲ ಮನೆಗಳ್ಳರು

ಸುದ್ದಿಲೈವ್. ಕಾಂ/ಭದ್ರಾವತಿ

ಭದ್ರಾವತಿಯ ಹೊಸಸಿದ್ದಾಪುರದಲ್ಲಿರುವ ಎನ್ ಟಿಬಿ ಲೇಔಟ್ ರಸ್ತೆಯಲ್ಲಿರುವ ಪೊಲೀಸ್ ಅಧಿಕಾರಿಗಳ ಮನೆಗೆ ಕನ್ನ ಹಾಕಲಾಗಿದೆ.

ಡ್ಯೂಟಿಗೆ ಹೋದಾಗ ಮನೆಯ ಹಿಂಬಾಗಿಲು ಮುರಿದು 1,22,000/- ರೂ. ಮೌಲ್ಯದ 27 ಗ್ರಾಂ ಚಿನ್ನ ಹಾಗೂ ನಗದು ಕಳುವಾಗಿದೆ. ನಿನ್ನೆ ಡ್ಯೂಟಿಗೆ ಹೋಗಿ ಮದ್ಯಾಹ್ನ ಊಟಕ್ಕೆ ಬಂದಾಗ ಈ ಘಟನೆ ಕಂಡು ಬಂದಿದೆ.

ಮನೆಯಲ್ಲಿ ಒಬ್ಬರೆ ಇದ್ದಿದ್ದರಿಂದ ಪೊಲೀಸ್ ಅಧಿಕಾರಿ ಮಂಜೇಶ್ವರ್ (54) ನಿನ್ನೆ ಕೆಲಸಕ್ಕೆ ಹೋಗುವಾಗ ಮನೆ ಲಾಕ್ ಮಾಡಿಕೊಂಡು ಹೋಗಿದ್ದರು. ಜೊತೆಗೆ ಮನೆಯ ಗೇಟಿನ ಬೀಗವನ್ನೂ ಸಹ ಹಾಕಿಕೊಂಡು ಹೋಗಿದ್ದರು. ಮಧ್ಯಹ್ನ 2-30 ರ ವೇಳೆಗೆ ಊಟಕ್ಕೆ ಬಂದಾಗ ಮನೆಯ ಮುಂದಿನ ಬಾಗಿಲಿನ ಇಂಟರ್ ಲಾಕ್ ಒಡೆಯಲಾಗಿದೆ.

ಮನೆಯ ಹಿಂಬದಿ ಹೋಗಿ ನೋಡಿದಾಗ ಹಿಂಬದಿಯ ಬಾಗಿಲು ಸಹ ತೆರೆದಿತ್ತು. ಮನೆಯ ಕೊಠಡಿಯ ಕಬೋರ್ಡ್ ನಲ್ಲಿದ್ದ 1)16000/- ರೂ. ಬೆಲೆ ಬಾಳುವ 4 ಗ್ರಾಂ ತೂಕದ ಬಂಗಾರದ ಡಾಲರ್. 2)32000/- ರೂ. ಬೆಲೆ ಬಾಳುವ 08 ಗ್ರಾಂ ತೂಕದ ಬಂಗಾರದ ಒಂದು ಜೊತೆ ಓಲೆ ಜುಮುಕಿ,

3)30000/-ರೂ. ಬೆಲೆ ಬಾಳುವ 9 ಗ್ರಾಂ ತೂಕದ ಬಂಗಾರದ ಕರಿಮಣಿಗಳಿರುವ ಚೈನು 4)16000/-ರೂ. ಬೆಲೆ ಬಾಳುವ 04 ಗ್ರಾಂ ತೂಕದ ಬಂಗಾರದ ಹ್ಯಾಂಗಿಂಗ್ಸ್, 5)8000/- ರೂ ಬೆಲೆ ಬಾಳುವ 2 ಗ್ರಾಂ ತೂಕದ ಬಂಗಾರದ ಒಂದು ಜೊತೆ ವಾಲೆ ಹಾಗೂ ಡೈನಿಂಗ್ ಹಾಲ್ ನಲ್ಲಿ ಇದ್ದ ಅರಾದನ 10000/- ರೂ ನಗದು ಹಣ,

ಪಿರ್ಯಾದಿ ಮಗ ಮನೋಜ್ ರವರ ಬೆಡ್ ರೂಂ ನಲ್ಲಿ ಡ್ರಾ ಒಳಗಡೆ ಇಟ್ಟಿದ್ದ 10000/- ರೂ.ಗಳು ಕಳ್ಳತನವಾಗಿದ್ದು, ಒಟ್ಟು, 1,02,000/- ರೂ. ಬೆಲೆ ಬಾಳುವ 27 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 20,000/- ರೂ. ನಗದು ಎಲ್ಲಾ ಸೇರಿ 1,22,000/- ರೂ ಬೆಲೆಯ ಆಭರಣ ಹಾಗೂ ನಗದು ಹಣ ಕಳ್ಳತನವಾಗಿದೆ. ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button