ಕ್ರೈಂ

ನ್ಯಾಯಾಲಯದ ಜಾಮೀನು ಉಲ್ಲಂಘನೆ-ಮತ್ತೆ ಮೂವರ ವಿರುದ್ಧ ಎಫ್ಐಆರ್

ಸುದ್ದಿಲೈವ್. ಕಾಂ/ತೀರ್ಥಹಳ್ಳಿ

ನ್ಯಾಯಾಲಯಕ್ಕೆ ಹಾಜರಾಗದೆ ಇರುವ ವ್ಯಕ್ತಿಗಳ ಪತ್ತೆಗಾಗಿ ಇನ್ನೂ ಮೂವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಈ ಮೊದಲು ಎರಡು ಎಫ್ಐಆರ್ ದಾಖಲಾದ ಬೆನ್ನಲ್ಲೇ ಈಗ ಇನ್ನೂ ಮೂವರ ವಿರುದ್ಧ ದೂರು ದಾಖಲಾಗಿದೆ.

ಬಶೀರ್ ಮತ್ತು ಗಜಾನನ ಎಂಬುವರ ಮೇಲೆ ಎರಡು ಎಫ್ ಐ ಆರ್ ಆಗಿತ್ತು. ಈಗ ನಾಯಕಗುಡ್ಡದ ನಿವಾಸಿ ಲಾರೆನ್ಸ್ ಡಾಲ್ಮೆಡ ಯಾನೆ ನಾಗೇಶ, ಶಿರಾಳಕೊಪ್ಪದ ಮತ್ತಿಗೆ ಶೇಖರ್ ಹಾಗೂ‌ ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಹರೂನ್ ರಶೀದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅಪರಾಧಗಳಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗುವಂತೆ ವಾರೆಂಟ್ ನೀಡಲಾಗಿದ್ದರೂ ತಲೆ ಮರೆಸಿಕೊಂಡಿರುವ‌ ಈ ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.

ಹರೂನ್ ರಶೀದ್, ಲಾರೆನ್ಸ್ ಡಾಲ್ಮೆಡ್ ಮತ್ತಿಗೆ ಶೇಖರ್ ತೀರ್ಥಹಳ್ಳಿ ಪೊಲೀಸ್ವಠಾಣೆ ವ್ಯಾಪ್ತಿಯಲ್ಲಿ ಮನೆಕಳ್ಳತನದಲ್ಲಿ ಭಾಗಿಯಾಗಿ ನ್ಯಾಯಾಲಯದ ಜಾಮೀನಿನ ಮೇಲೆ ಹೊರಗಿದ್ದು ಈಗ ನ್ಯಾಯಾಲದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button