ಸುದ್ದಿ

ಫ್ರೆಶಪ್ ಗೆಂದು ಹೋದ ಮಹಿಳೆ ಕಾಲು ಜಾರಿ ಸಾವು

ಸುದ್ದಿಲೈವ್.ಕಾಂ/ಜೋಗ

ಜೋಗದ ಜಂಗಲ್ ರೆಸಾರ್ಟ್ ಗೆ ಫ್ರೆಶಪ್ ಗೆಂದು ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಸಾವನ್ನಪ್ಪಿದ್ದು ಮೃತಪಟ್ಟ ಮಹಿಳೆಯ ಚಿಕ್ಕಪ್ಪ ಈ ಸಾವಿನ ಬಗ್ಗೆ  ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಹೊಸಕೋಟೆ ನಿವಾಸಿಗಳಾದ ನಿಶಾ ನಿನ್ನೆ ಜೋಗಕ್ಕೆ ಪ್ರವಾಸಕ್ಕೆ ಬಂದಿದ್ದರು. ಜೋಗದಿಂದ 5 ಕಿಮಿ ದೂರದಲ್ಲಿರುವ ಜಂಗಲ್ ರೆಸಾರ್ಟ್ ಗೆ ಫ್ರೆಶಪ್ ಗೆ ಹೋದಾಗ ಈ ಘಟನೆ ನಡೆದಿದೆ.

ಪತಿ ನಾಗೇಶ್ ಕೋಲಾರದಲ್ಲಿ ಆಟೋ ಮೊಬೈಲ್ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ಇವರು ಜೋಗದಲ್ಲಿ ಎಲ್ಲೂ ರೂಂ ಮಾಡಿರಲಿಲ್ಲ ಎಂದು ತಿಳಿದು ಬಂದಿದ್ದು, ಕಾರಿನಲ್ಲೇ ಉಳಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಈ ಸಾವಿನ ಬಗ್ಗೆ ಮೃತ ನಿಶಾರ ಚಿಕ್ಕಪ್ಪ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರೇ ಇರುವುದರಿಂದ ನಿಶಾರ ಆಕಸ್ಮಿಕ ಸಾವಲ್ಲ ಇದೊಂದು ಕೊಲೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಯುಡಿಆರ್ ನಲ್ಲಿ ಉಲ್ಲೇಖಿಸಿದ್ದಾರೆ.

 

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button