ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಯಿ ಕೊರಳಲಿದ್ದ ಚಿನ್ನದ ಸರ ಕಳವು-ಎಸ್ಪಿಗೆ ದೂರು

ಸುದ್ದಿಲೈವ್. ಕಾಂ/ಶಿವಮೊಗ್ಗ
ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ತಾಯಿಯ ಕೊರಳಲ್ಲಿದ್ದ 35 ಗ್ರಾಂ ಲಕ್ಷ್ಮೀ ಪೆಂಡಟ್ ನ ಚಿನ್ನದ ಸರ ಕಳುವಾಗಿರುವ ಬಗ್ಗೆ ಮೃತರ ಮಗ ಅರುಣ್ ಕುಮಾರ್ ಅನುಮಾನ ವ್ಯಕ್ತಪಡಿಸಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀ ಪ್ರಸಾದ್ ರಿಗೆ ಮನವಿ ಸಲ್ಲಿಸಿದ್ದಾರೆ.
ಜೂ.10 ರಂದು ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ನೆಜ್ಜೂರು ನಿವಾಸಿ ಅರುಣ್ ಕುಮಾರ್ ಅವರ ತಾಯಿ ವಿಶಾಲಾಕ್ಷಮ್ಮ (50) ಎಂಬುವರು ಬೆಂಗಳೂರಿನಲ್ಲಿ ವಾಸವಾಗಿರುವ ಮಗಳ ಮನೆ ಗೃಹಪ್ರವೇಶಕ್ಕೆ ಹೋಗಿ ವಾಪಾಸ್ ನೆಜ್ಜೂರಿಗೆ ಪರಿಚಯಸ್ಥರ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ಅರುಣ್ ಗೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಸ್ನೇಹಿತ ಹರೀಶ್, ಪತ್ನಿ ಗೀತಾ, ಕಾರಿನ ಚಾಲಕ ಗೋರ್ವಧನ್ ಮತ್ತು ಹರೀಶ್ ನ 1½ ವರ್ಷದ ಮಗುವಿನೊಂದಿಗೆ ವಿಶಾಲಾಕ್ಷಮ್ಮ ಸ್ವಿಫ್ಟ್ ಕಾರಿನಲ್ಲಿ ದಾವಣಗೆರೆ ಮಾರ್ಗವಾಗಿ ಶಿರಾಳಕೊಪ್ಪದ ಮೂಲಕ ಸಿದ್ದಪುರದ ನೆಜ್ಜೂರು ಗ್ರಾಮಕ್ಕೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಬವಸನಂದಿ ಕ್ರಾಸ್ ಬಳಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ವಿಶಾಲಕ್ಷಮ್ಮ ಮೃತ ಪಟ್ಟಿರುತ್ತಾರೆ. ಆ ದಿನ ವಿಶಾಲಕ್ಷಮ್ಮ 10 ಗ್ರಾಂ ಚಿನ್ನದ ಸರವೊಂದು ಮತ್ತು 35 ಗ್ರಾಂ ಲಕ್ಷ್ಮೀ ಪೆಂಡೆಂಟ್ ಚಿನ್ಬದ ಸರವೊಂದು ಧರಿಸಿದ್ದರು. ಅಪಘಾತದಲ್ಲಿ ಮೃತರಾದ ತಾಯಿಯನ್ನ ಅಂಬ್ಯುಲೆನ್ಸ್ ಮೂಲಕ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತ ನಡೆದ ಘಟನೆಯಿಂದ ಆಸ್ಪತ್ರೆಗೆ ಸಾಗಿಸುವಾಗ 10 ಗ್ರಾಂ ಚಿನ್ನದ ಸರ ಹೊರತು ಪಡಿಸಿ 35 ಗ್ರಾಂ ಚಿನ್ನದ ಸರ ಕಳವಾಗಿದೆ ಎಂದು ಅರುಣ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ದೂರು ಸ್ವೀಕರಿಸಿಲ್ಲವೆಂದು ಅರುಣ್ ಕುಮಾರ್ ಆರೋಪಿಸಿದ್ದು ಈ ಹಿನ್ಬಲೆಯಲ್ಲಿ ಶಿವಮೊಗ್ಗ ಎಸ್ಪಿಗೆ ಅಂಚೆ ಮೂಲಕ ಮನವಿ ಸಲ್ಲಿಸಿದ್ದಾರೆ.

