ರಾಜ್ಯ
ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆ

ಸುದ್ದಿಲೈವ್.ಕಾಂ/ಹುಬ್ಬಳ್ಳಿ
ಸರಳವಾಸ್ತು ಖ್ಯಾತಿ ಜ್ಯೋತಿಷಿ ಚಂದ್ರಶೇಖರ್ ಗುರೂಜಿಯನ್ನ ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ಖಾಸಗಿ ಹೋಟೆಲ್ ನಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಲೆಮಾಡಲಾಗಿದೆ.
ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಗುರೂಜಿ ಅಬರ ಕಾಲಿಗೆ ಎರಗಿ ನಮಸ್ಕರಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ರಿಸೆಪ್ಷನ್ ನ ಬಳಿ ನಿಂತಿದ್ದ ಗುರೂಜಿಯನ್ನ ಭಕ್ತರಂತೆ ಬಂದು ಕೊಲೆ ಮಾಡಲಾಗಿದೆ.
ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗುರೂಜಿಯನ್ನ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ನಗರದ ಪೊಲೀಸ್ ಆಯುಕ್ತ ಲಾಬೂರಾಮ್ ಭೇಟಿ ನೀಡಿದ್ದಾರೆ. ಮೃತ ದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭವಾಗಿದೆ.

