ಸ್ಥಳೀಯ ಸುದ್ದಿಗಳು
ಬೆಳ್ಳಂಬೆಳಿಗ್ಗೆನೇ ದೇವಸ್ಥಾನದಲ್ಲಿ ಕಾಣಿಸಿಕೊಂಡ ಆಭರಣದ ಹಾವು

ಸುದ್ದಿಲೈವ್. ಕಾಂ/ಶಿವಮೊಗ್ಗ
ಚಾಲುಕ್ಯ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಎರಡು ಅಡಿ ಆಭರಣದ ಹಾವು ಕಾಣಿಸಿಕೊಂಡಿದ್ದು ಅದನ್ನ ಸ್ನೇಕ್ ಕಿರಣ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಕೆಲಸಕ್ಕೆ ಬಂದ ಮಹಿಳೆಯೊಬ್ಬರಿಗೆ ಈ ಹಾವು ಕಾಣಿಸಿಕೊಂಡಿದೆ. ಎರಡು ಅಡಿಯ ಉದ್ದ ಹಾವನ್ನ ಸ್ನೇಕ್ ಕಿರಣ್ ಬಂದು ಹಿಡಿದಿದ್ದಾರೆ.
ಆಭರಣದ ಹಾವು ಅಪರೂಪದಲ್ಲಿ ಅಪರೂಪ, ಆದರೆ ಕೊಳಕಮಂಡಲ ಹಾವಿನ ರೀತಿಯಲ್ಲಿಯೇ ಕಾಣಿಸಿಕೊಳ್ಳುವುದರಿಂದ ಜನಭಯಭೀತರಾಗುತ್ತಾರೆ. ಈ ಹಾವು ವಿಷ ರಹಿತ ಹಾವು ಎಂದು ಸ್ನೇಕ್ ಕಿರಣ್ ವಿವರಿಸಿದ್ದಾರೆ.

