ರಾಜ್ಯ

ಭದ್ರ ನದಿಯ ಒಳಹರಿವು ಹೆಚ್ಚಳ-ಲಿಂಗನಮಕ್ಕಿಯಲ್ಲಿ ಒಂದೇ ದಿನ 3 ಅಡಿ ನೀರು ಸಂಗ್ರಹ

ಸುದ್ದಿಲೈವ್.ಕಾಂ/ಭದ್ರಾವತಿ

ಮಲೆನಾಡಿನ ಜಿಟಿ ಜಿಟಿ ಮಳೆಗೆ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗೆ ಒಂದು ಕಡೆ ಭೋರ್ಗೆರದು ಹರಿಯಲು ಆರಂಭಿಸಿದರೆ ಭದ್ರ ನದಿಗೂಒಳ ಹರಿವು ಹೆಚ್ಚಾಗಿದೆ.

ಬಿಆರ್ ಪಿಯಲ್ಲಿ ಭದ್ರ ನದಿಯ ಒಳಹರಿವಿನಿಂದ ಎರಡು ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ 186 ಅಡಿ ಎತ್ತರವಿರುವ ಭದ್ರ ಡ್ಯಾಂ ನಲ್ಲಿ ಸಧ್ಯ 158″ 6 ಅಡಿ ನೀರು ಸಂಗ್ರಹವಾಗಿದೆ. 71.535 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಭದ್ರ ಡ್ಯಾಂನಲ್ಲಿ ಪ್ರಸ್ತುತ 41.536 ನೀರು ಸಂಗ್ರಹವಾಗಲಿದೆ.

ಜು.3 ರಂದು 154″ 3 ಅಡಿ ನೀರು ಸಂಗ್ರಹವಾಗಿದ್ದ ಭದ್ರ ಡ್ತಾಂನಲ್ಲಿ 11,517 ಕ್ಯೂಸೆಕ್ಸ್ ನೀರು ಒಳ ಹರಿವಿದ್ದರೆ ಜು. 04 ರಂದು 155″ 7 ಅಡಿಗೆ ಹೆಚ್ಚಳವಾಯಿತು. ಇದರಿಂದ 13405 ಕ್ಯೂಸೆಕ್ಸ್ ನೀರು ಹರಿದು ಬಂದಿದೆ.

ಅದೇ ರೀತಿ ಇಂದು ಸಹ ಭದ್ರಾನದಿಯ ಒಳ ಹರಿವು ಹೆಚ್ಚಳವಾಗಿದೆ. 30,167 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. 155″ 7 ಅಡಿ ಇದ್ದ ನಿನ್ನೆಯ ನೀರಿನ ಮಟ್ಟ ಇಂದು 158″ “6 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಭದ್ರ ಡ್ಯಾಂನಲ್ಲಿ 155” 3 ಅಡಿ ನೀರು ಶೇಖರಣೆಯಾಗಿತ್ತು.

ಲಿಂಗನ‌ಮಕ್ಕಿಗೆ ಒಂದೇ ದಿನ 3 ಅಡಿ ನೀರು ಸಂಗ್ರಹ

ಅದರಂತೆ ಲಿಂಗನಮಕ್ಕಿ ಅಣೆಕಟ್ಟು ಸಹ ಹೆಚ್ಚಳವಾಗಿದೆ. ಗರಿಷ್ಠ 1819 ಅಡಿ ಎತ್ತರದ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ನಿನ್ನೆ 17007 ಕ್ಯೂಸೆಕ್ಸ್ ನೀರು ಒಳಹರಿವಿದ್ದುದ್ದರಿಂದ ಡ್ಯಾಂನಲ್ಲಿ 1759.05 ಅಡಿ ನೀರು ಸಂಗ್ರಹವಾಗಿತ್ತು. ಇಂದು 39,262 ಕ್ಯೂ ಸೆಕ್ಸ್ ನೀರು ಹರಿದು ಬರುತ್ತಿರುವುದರಿಂದ 1762.10 ಅಡಿ ನೀರು ಸಂಗ್ರಹವಾಗಿದೆ. ಒಂದೇ ದಿನ 3 ಅಡಿ ನೀರು ಸಂಗ್ರಹವಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button